×
Ad

ಭಾರತದ ಎನ್‌ಎಸ್‌ಜಿ ಪ್ರವೇಶ ಬಗ್ಗೆ ಚರ್ಚೆಯಿಲ್ಲ: ಚೀನಾ

Update: 2019-06-21 23:23 IST

 ಬೀಜಿಂಗ್, ಜೂ. 21: ಪರಮಾಣು ಪ್ರಸರಣ ತಡೆ ಒಪ್ಪಂದ (ಎನ್‌ಪಿಟಿ)ಕ್ಕೆ ಸಹಿ ಹಾಕದ ದೇಶಗಳು ಪರಮಾಣು ಪೂರೈಕೆದಾರರ ಗುಂಪಿ (ಎನ್‌ಎಸ್‌ಜಿ)ನಲ್ಲಿ ಭಾಗವಹಿಸುವುದಕ್ಕೆ ಸಂಬಂಧಿಸಿದ ನಿರ್ದಿಷ್ಟ ಯೋಜನೆಯೊಂದು ಸಿದ್ಧಗೊಳ್ಳುವ ಮುನ್ನ ಈ ಗುಂಪಿಗೆ ಭಾರತ ಸೇರ್ಪಡೆಗೊಳ್ಳುವ ಬಗ್ಗೆ ಯಾವುದೇ ಚರ್ಚೆಯಿರುವುದಿಲ್ಲ ಎಂದು ಚೀನಾ ಶುಕ್ರವಾರ ಹೇಳಿದೆ.

ಎನ್‌ಎಸ್‌ಜಿಯ ಪೂರ್ಣ ಸಭೆಯು ಕಝಖ್‌ಸ್ತಾನದ ಅಸ್ತಾನದಲ್ಲಿ ಜೂನ್ 20 ಮತ್ತು 21ರಂದು ನಡೆದಿದೆ.

ಈ ಗುಂಪಿಗೆ ಭಾರತದ ಸೇರ್ಪಡೆಯ ಕುರಿತ ಚೀನಾದ ನಿಲುವಿನಲ್ಲಿ ಯಾವುದೇ ಬದಲಾವಣೆಯಾಗಿದೆಯೇ ಎಂಬುದಾಗಿ ಪತ್ರಿಕಾಗೋಷ್ಠಿಯೊಂದರಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಚೀನಾದ ವಿದೇಶ ಸಚಿವಾಲಯದ ವಕ್ತಾರ ಲೂ ಕಾಂಗ್, ಎನ್‌ಪಿಟಿಗೆ ಸಹಿ ಹಾಕದ ದೇಶಗಳು ಎನ್‌ಎಸ್‌ಜಿಗೆ ಸೇರುವ ಬಗ್ಗೆ ಈ ಗುಂಪಿನಲ್ಲಿ ಯಾವುದೇ ಚರ್ಚೆಯಾಗುವುದಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News