ಜಪಾನನ್ನು ಮಣಿಸಿ ಎಫ್ಐಎಚ್ ಫೈನಲ್ಸ್ ಗೆದ್ದ ಭಾರತದ ಮಹಿಳಾ ಹಾಕಿ ತಂಡ

Update: 2019-06-23 17:37 GMT

ಜೂ. 23: ಭಾರತದ ವನಿತೆಯರ ಹಾಕಿ ತಂಡ ಎಫ್‌ಐಎಚ್ ಸಿರೀಸ್ ಫೈನಲ್ಸ್‌ನ ಫೈನಲ್‌ನಲ್ಲಿ ರವಿವಾರ ಜಪಾನ್ ವಿರುದ್ಧ 3-1 ಅಂತರದಲ್ಲಿ ಜಯ ಗಳಿಸಿದೆ.

ಶನಿವಾರ ಎಫ್‌ಐಎಚ್ ಸಿರೀಸ್ ಫೈನಲ್ಸ್‌ನ ಸೆಮಿಫೈನಲ್‌ನಲ್ಲಿ ಚಿಲಿ ತಂಡವನ್ನು 4-2 ಅಂತರದಲ್ಲಿ ಮಣಿಸಿದ್ದ ಭಾರತದ ವನಿತೆಯರು ಫೈನಲ್‌ನಲ್ಲಿ ಕಠಿಣ ಹೋರಾಟದ ಮೂಲಕ ಏಷ್ಯನ್ ಚಾಂಪಿಯನ್ ಜಪಾನ್ ತಂಡಕ್ಕೆ ಸೋಲುಣಿದರು.

ಸೆಮಿಫೈನಲ್‌ನಲ್ಲಿ ಜಯಿಸಿ 2020ರ ಟೋಕಿಯೋ ಒಲಿಂಪಿಕ್ ಕ್ವಾಲಿಫೈಯರ್ಸ್ ಫೈನಲ್ ರೌಂಡ್‌ಗೆ ಪ್ರವೇಶ ಗಿಟ್ಟಿಕೊಂಡಿದ್ದ ಭಾರತದ ವನಿತೆಯರು ಇಂದು ಯಾವುದೇ ಒತ್ತಡವಿಲ್ಲದೆ ಆಡಿದರು.

ಭಾರತದ ನಾಯಕಿ ರಾಣಿ ರಾಂಪಾಲ್ 3ನೇ ನಿಮಿಷದಲ್ಲಿ ಗೋಲು ಜಮೆ ಮಾಡುವ ಮೂಲಕ ಭಾರತದ ಗೋಲು ಖಾತೆ ತೆರೆದರು. ಆದರೆ ಜಪಾನ್‌ನ ಕ್ಯಾನೊನ್ ಮೊರಿ 11ನೇ ನಿಮಿಷದಲ್ಲಿ ಗೋಲು ಜಮೆ ಮಾಡಿ 1-1 ಸಮಬಲ ಸಾಧಿಸಿದರು.

ಉಭಯ ತಂಡಗಳಿಂದಲೂ ಹೋರಾಟ ಕಂಡು ಬಂದು ಪ್ರಥಮಾರ್ಧ ಕೊನೆಗೊಳ್ಳುವ ತನಕವೂ ಮತ್ತೆ ಗೋಲು ಬರಲಿಲ್ಲ. ಡ್ರಾಗ್ ಫ್ಲಿಕ್ಕರ್ ಗುರ್ಜಿತ್ ಕೌರ್ 45ನೇ ನಿಮಿಷದಲ್ಲಿ ಗೋಲು ಬಾರಿಸಿ ಭಾರತಕ್ಕೆ ಮೇಲುಗೈ ಸಾಧಿಸಲು ನೆರವಾದರು. 60ನೇ ನಿಮಿಷದಲ್ಲಿ ಇನ್ನೊಂದು ಗೋಲು ಗಳಿಸಿದ ಕೌರ್ ಭಾರತಕ್ಕೆ 3-1 ಅಂತರದಲ್ಲಿ ಗೆಲುವು ದಾಖಲಿಸಲು ಸಹಾಯ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News