ಹಲವು ರೈಲುಗಳ ವಿಳಂಬಕ್ಕೆ ಕಾರಣವಾಯಿತು ಸಣ್ಣ ಹುಳ!

Update: 2019-06-23 15:46 GMT

ಟೋಕಿಯೊ, ಜೂ.23: ಹಳಿಯ ಸಮೀಪ ಸ್ಥಾಪಿಸಲಾಗಿದ್ದ ವಿದ್ಯುತ್‌ಚ್ಛಕ್ತಿ ಸಾಧನವೊಂದರ ಒಳಗೆ ಅಂಟುಹುಳವೊಂದು ಹೋದ ಪರಿಣಾಮ ವಿದ್ಯುತ್ ವ್ಯತ್ಯಯ ಉಂಟಾಗಿ ಅನೇಕ ರೈಲುಗಳು ವಿಳಂಬವಾಗುವುದರೊಂದಿಗೆ 12,000 ಪ್ರಯಾಣಿಕರು ಸಂಕಷ್ಟಕ್ಕೊಳಗಾದ ಘಟನೆ ಜಪಾನ್‌ನಲ್ಲಿ ನಡೆದಿದೆ.

 ಕ್ಯುಶು ರೈಲ್ವೇ ಕಂಪೆನಿ ನಿರ್ವಹಿಸುವ ದಕ್ಷಿಣ ಜಪಾನ್‌ನ ವಿದ್ಯುತ್ ಲೈನ್‌ಗಳಲ್ಲಿ ವಿದ್ಯುತ್ ವೈಫಲ್ಯವುಂಟಾದ ಪರಿಣಾಮ ರೈಲುಗಳು ವಿಳಂಬವಾಗಿವೆ. ವಿದ್ಯುತ್ ವ್ಯತ್ಯಯದಿಂದಾಗಿ ಕಂಪೆನಿ 26 ರೈಲುಗಳನ್ನು ಸ್ಥಗಿತಗೊಳಿಸಬೇಕಾಗಿ ಬಂದಿತ್ತು. ಘಟನೆ ನಡೆದ ವಾರಗಳ ನಂತರ ಇದರ ತನಿಖೆ ನಡೆಸಿದ ಕ್ಯೂಶು ರೈಲ್ವೇ ಕಂಪೆನಿ, ಈ ಸಮಸ್ಯೆಗೆ ಕಾರಣ ಒಂದು ಸಣ್ಣ ಅಂಟುಹುಳವಾಗಿದೆ. ಅಂಟುಹುಳ ವಿದ್ಯುತ್ ಸಾಧನವೊಂದರ ಒಳಗೆ ಪ್ರವೇಶಿಸಿದ ಕಾರಣ ವಿದ್ಯುತ್ ವ್ಯತ್ಯಯವುಂಟಾಗಿದೆ ಎಂದು ತಿಳಿಸಿದೆ.

 ಅಂಟುಹುಳ ವಿದ್ಯುತ್ ಸಾಧನದ ಒಳಗೆ ಪ್ರವೇಶಿಸಿದ ಪರಿಣಾಮ ಶಾರ್ಟ್‌ಸರ್ಕ್ಯೂಟ್ ಆಗಿದೆ. ಈ ವೇಳೆ ಹುಳ ಕೂಡಾ ಸಾವನ್ನಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ರೈಲುಗಳಿಗೆ ಜಿಂಕೆ ಢಿಕ್ಕಿ ಹೊಡೆಯುವ ಘಟನೆಗಳು ಸಾಮಾನ್ಯ. ಆದರೆ ಹುಳವೊಂದು ಈ ರೀತಿ ಸಮಸ್ಯೆಯುಂಟು ಮಾಡಿರುವುದು ಇದೇ ಮೊದಲು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News