ಅಮೆರಿಕದ ತಾಳ್ಮೆಯನ್ನು ದೌರ್ಬಲ್ಯ ಎಂದು ಭಾವಿಸದಿರಿ: ಇರಾನ್‌ಗೆ ಬೋಲ್ಟನ್ ಎಚ್ಚರಿಕೆ

Update: 2019-06-23 16:37 GMT

ಜೆರುಸಲೇಂ, ಜೂ.23: ಇರಾನ್ ವಿರುದ್ಧ ಪ್ರತಿದಾಳಿಯನ್ನು ನಡೆಸದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರವನ್ನು ಅಮೆರಿಕದ ದೌರ್ಬಲ್ಯ ಎಂದು ಭಾವಿಸಬಾರದು ಎಂದು ಯುಎಸ್ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ.

ಇರಾನ್ ಅಥವಾ ಇನ್ಯಾವುದೇ ಶತ್ರುರಾಷ್ಟ್ರ ಅಮೆರಿಕದ ತಾಳ್ಮೆಯನ್ನು ಅದರ ದೌರ್ಬಲ್ಯ ಎಂದು ಪರಿಗಣಿಸಬಾರದು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಜೆರುಸಲೇಂನಲ್ಲಿ ಭೇಟಿಯಾಗುವುದಕ್ಕೂ ಮುನ್ನ ಬೋಲ್ಟನ್ ತಿಳಿಸಿದ್ದಾರೆ.

 ನಮ್ಮ ಸೇನೆಯನ್ನು ಮರುನಿರ್ಮಿಸಲಾಗಿದ್ದು ಕಾರ್ಯಾಚರಣೆಗೆ ಸಿದ್ಧವಾಗಿದೆ ಎಂದು ಬೋಲ್ಟನ್ ತಿಳಿಸಿದ್ದಾರೆ. ಅಮೆರಿಕದ ಡ್ರೋನನ್ನು ಹೊಡೆದುರುಳಿಸಿದ ಇರಾನ್ ವಿರುದ್ಧ ಪ್ರತಿದಾಳಿ ನಡೆಸುವ ನಿರ್ಧಾರವನ್ನು ಟ್ರಂಪ್ ಕೊನೆಯ ಗಳಿಗೆಯಲ್ಲಿ ಕೈಬಿಟ್ಟಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News