ಧರೆಗುರುಳಿದ ಕಟ್ಟಡ: 18 ಬಲಿ, 24 ಮಂದಿಗೆ ಗಾಯ

Update: 2019-06-23 16:41 GMT

ನೊಮ್ ಪೆನ್, ಜೂ.23: ನಿರ್ಮಾಣ ಹಂತದಲ್ಲಿದ್ದ ಕಟ್ಟಡವೊಂದು ಕುಸಿದುಬಿದ್ದ ಪರಿಣಾಮ 18 ಮಂದಿ ಸಾವನ್ನಪ್ಪಿ ಕನಿಷ್ಟ 24 ಮಂದಿ ಗಾಯಗೊಂಡ ಘಟನೆ ಕಾಂಬೋಡಿಯದಲ್ಲಿ ಶನಿವಾರ ನಡೆದಿದೆ. ಕಟ್ಟಡದ ಅವಶೇಷದ ಅಡಿಯಲ್ಲಿ ಸಿಲುಕಿರುವವರನ್ನು ರಕ್ಷಿಸಲು ರಕ್ಷಣಾ ಕಾರ್ಯಕರ್ತರು ಪ್ರಯತ್ನಿಸುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಕಾಂಬೋಡಿಯ ರಾಜಧಾನಿ ನೊಮ್ ಪೆನ್‌ನ ಪಶ್ಚಿಮಕ್ಕಿರುವ ಕರಾವಳಿ ಪಟ್ಟಣ ಸಿಹನೌಕ್ವಿಲ್ಲೆಯಲ್ಲಿ ನಿರ್ಮಿಸಲಾಗುತ್ತಿದ್ದ ಏಳು ಮಹಡಿಯ ಸ್ಟೀಲ್ ಮತ್ತು ಕಾಂಕ್ರೀಟ್ ಕಟ್ಟಡದ ನಿರ್ಮಾಣ ಕಾರ್ಯವನ್ನು ಚೀನಾದ ಸಂಸ್ಥೆ ನಡೆಸುತ್ತಿತ್ತು. ಸ್ಟೀಲ್ ನಿಂದ ನಿರ್ಮಿಸಲ್ಪಟ್ಟ ಕಟ್ಟಡ ಏಕಾಏಕಿ ಧರೆಗುರುಳಿತು ಮತ್ತು ನಮಗೆ ಅದರ ಅವಶೇಷಗಳನ್ನು ಅಲುಗಾಡಿಸಲೂ ಸಾಧ್ಯವಾಗಲಿಲ್ಲ. ಒಳಗಿನಿಂದ ಬದುಕುಳಿದಿರುವವರಿಂದ ಯಾವುದಾದರೂ ಸೂಚನೆ ಬರಬಹುದೇ ಎಂದು ನಾವು ಕಾಯಬೇಕಾಯಿತು ಎಂದು ರಕ್ಷಣಾ ಕಾರ್ಯಕರ್ತರು ತಿಳಿಸಿದ್ದಾರೆ. ಘಟನೆಗೆ ಸಂಬಂಧಪಟ್ಟಂತೆ ಮೂವರು ನಿರ್ಮಾಣ ಮೇಲ್ವಿಚಾರಕರು ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News