ಇರಾನ್ ವಿರುದ್ಧ ರಹಸ್ಯ ಸೈಬರ್ ದಾಳಿ ನಡೆಸುತ್ತಿರುವ ಅಮೆರಿಕ: ವರದಿ

Update: 2019-06-23 17:02 GMT

ಟೆಹ್ರಾನ್, ಜೂ.23: ಡೊನಾಲ್ಡ್ ಟ್ರಂಪ್ ಸೇನಾ ಪಡೆಗಳನ್ನು ಬಳಸುವ ಸಾಂಪ್ರದಾಯಿಕ ವಿಧಾನಗಳಿಂದ ಹಿಂದೆ ಸರಿದ ದಿನದಂದೇ ಇರಾನ್‌ನ ಬೇಹುಗಾರಿಕ ಗುಂಪಿನ ಕಂಪ್ಯೂಟರ್ ವ್ಯವಸ್ಥೆಯ ಮೇಲೆ ಅಮೆರಿಕ ರಹಸ್ಯ ಸೈಬರ್ ದಾಳಿ ನಡೆಸಿದೆ ಎಂದು ವರದಿಗಳು ತಿಳಿಸಿವೆ.

 ಟ್ರಂಪ್ ಅನುಮೋದನೆ ಪಡೆದಿರುವ ಈ ಸೈಬರ್ ದಾಳಿಯಲ್ಲಿ, ಕಳೆದ ತಿಂಗಳು ತೊಂದರೆಯುಂಟು ಮಾಡಲು ಆಯ್ಕೆ ಮಾಡಲಾಗಿದ್ದ ಕ್ಷಿಪಣಿಗಳು ಮತ್ತು ರಾಕೆಟ್ ಲಾಂಚರ್‌ಗಳನ್ನು ನಿಯಂತ್ರಿಸಲು ಬಳಸುತ್ತಿರುವ ಕಂಪ್ಯೂಟರ್ ವ್ಯವಸ್ಥೆಯನ್ನು ಗುರಿಯಾಗಿಸಲಾಗಿದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ದಾಳಿಯನ್ನು ಅಮೆರಿಕದ ಕೇಂದ್ರ ಕಮಾಂಡ್‌ನ ಸಹಯೋಗದೊಂದಿಗೆ ಯುಎಸ್ ಸೈಬರ್ ಕಮಾಂಡ್ ನಡೆಸಿದೆ.

 ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹೊರಹಾಕಲು ನಿರಾಕರಿಸಿದ ಅಧಿಕಾರಿ, ಇಂತಹ ದಾಳಿಗಳಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸುವುದಿಲ್ಲ ಆದರೆ ಬಹ ಪರಿಣಾಮಕಾರಿಯಾಗಿದೆ ಎಂದು ತಿಳಿಸಿದ್ದಾರೆ. ಅಮೆರಿಕದ ಡ್ರೋನನ್ನು ಇರಾನ್ ಸ್ಫೋಟಿಸಿರುವುದೂ ಸೇರಿದಂತೆ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಘಟನೆಗಳ ಸರಣಿಯ ಹಿನ್ನೆಲೆಯಲ್ಲಿ ಅಮೆರಿಕ ಮತ್ತು ಇರಾನ ಮಧ್ಯೆ ಉದ್ವಿಗ್ನತೆ ತಾರಕಕ್ಕೇರಿರುವ ಮಧ್ಯೆಯೇ ಈ ದಾಳಿ ನಡೆದಿದೆ. ಇರಾನ್ ಕಂಪ್ಯೂಟರ್ ಜಾಲಗಳ ಮೇಲೆ ದಾಳಿಗೆ ಯೋಜನೆ ರೂಪಿಸುತ್ತಿದೆ. ಮುಖ್ಯವಾಗಿ ಅದು, ಅಮೆರಿಕ ಸರಕಾರ ಮತ್ತು ತೈಲ ಮತ್ತು ಅನಿಲ ಸೇರಿದಂತೆ ಇಂಧನ ಕ್ಷೇತ್ರದ ಮೇಲೆ ಗಮನಹರಿಸುತ್ತಿದೆ ಎಂದು ಬಹಳಷ್ಟು ಸೈಬರ್ ಭದ್ರತೆ ಸಂಸ್ಥೆಗಳು ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಆತಂಕಕ್ಕೊಳಗಾಗಿರುವ ಅಮೆರಿಕ ಈ ಕ್ರಮ ತೆಗೆದುಕೊಂಡಿದೆ ಎಂದು ಎಫೆ ನ್ಯೂಸ್ ತಿಳಿಸಿದೆ.

ಇರಾನ್‌ನ ದುರುದ್ದೇಶಪೂರಿತ ಸೈಬರ್ ದಾಳಿಗಳು ಹೆಚ್ಚಾಗುತ್ತಿದ್ದು ಇದು ಸ್ವಭಾವತಃ ವಿಧ್ವಂಸಕವಾಗಬಹುದು ಎಂದು ಹೋಂಲ್ಯಾಂಡ್ ರಕ್ಷಣಾ ಇಲಾಖೆಯ ಸೈಬರ್ ಭದ್ರತೆಯ ಉನ್ನತ ಅಧಿಕಾರಿ ಕ್ರಿಸ್ ಕ್ರೆಬ್ಸ್ ಎಚ್ಚರಿಸಿದ್ದಾರೆ.

ಟ್ರಂಪ್ ಅವರ ಆಡಳಿತದ ಕಠಿಣ ನಿಲುವು ಮತ್ತು ದೇಶದ ವಿರುದ್ಧ ಅವರ ಟೀಕೆಗಳಿಗೆ ಪ್ರತೀಕಾರವಾಗಿ ಸೈಬರ್ ಮಾಧ್ಯಮವನ್ನು ಬಳಸುವ ಇರಾನ್‌ನ ಸಾಮರ್ಥ್ಯ ಮತ್ತು ಉದ್ದೇಶದ ಬಗ್ಗೆ ಹಲವು ತಿಂಗಳುಗಳಿಂದ ಆತಂಕ ಮಡುಮಟ್ಟಿತ್ತು ಎಂದು ಎಫೆ ನ್ಯೂಸ್ ತನ್ನ ವರದಿಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News