ವಿಶ್ವಕಪ್‌: ಶಾಕಿಬ್ ಸ್ಪಿನ್ ಜಾದೂಗೆ ಶರಣಾದ ಅಫ್ಘಾನ್

Update: 2019-06-24 17:22 GMT

ಸೌತಾಂಪ್ಟನ್, ಜೂ.24: ಶಾಕಿಬ್ ಅಲ್ ಹಸನ್ ಸರ್ವಾಂಗೀಣ ಪ್ರದರ್ಶನದ ಸಹಾಯದಿಂದ ಬಾಂಗ್ಲಾದೇಶ ತಂಡ ಅಫ್ಘಾನಿಸ್ತಾನ ವಿರುದ್ಧದ ವಿಶ್ವಕಪ್‌ನ 31ನೇ ಪಂದ್ಯದಲ್ಲಿ 62 ರನ್‌ಗಳ ಅಂತರದ ಗೆಲುವು ದಾಖಲಿಸಿದೆ.

ಬ್ಯಾಟಿಂಗ್‌ನಲ್ಲಿ 51 ರನ್ ಕೊಡುಗೆ ನೀಡಿದ್ದ ಶಾಕಿಬ್ ಬೌಲಿಂಗ್‌ನಲ್ಲಿ ಐದು ವಿಕೆಟ್ ಗೊಂಚಲು(5-29) ಪಡೆದು ಅಫ್ಘಾನ್ ತಂಡವನ್ನು ನಿಯಂತ್ರಿಸಿದರು.ಶಾಕಿಬ್‌ಗೆ ಮುಸ್ತಫಿಝರ್ರಹ್ಮಾನ್(2-32)ಸಾಥ್ ನೀಡಿದರು.

ಶಾಕಿಬ್ ವಿಶ್ವಕಪ್‌ನಲ್ಲಿ 5 ವಿಕೆಟ್ ಗುಚ್ಚ ಪಡೆದ ಬಾಂಗ್ಲಾದೇಶದ ಮೊದಲ ಬೌಲರ್. ಒಂದೇ ಆವೃತ್ತಿಯ ವಿಶ್ವಕಪ್‌ನಲ್ಲಿ ಶತಕ ಹಾಗೂ ಐದು ವಿಕೆಟ್ ಗೊಂಚಲು ಪಡೆದಿರುವ ಕಪಿಲ್‌ದೇವ್ ಹಾಗೂ ಯುವರಾಜ್ ಸಿಂಗ್‌ರಿದ್ದ ಪಟ್ಟಿಗೆ ಶಾಕಿಬ್ ಸೇರ್ಪಡೆಯಾದರು. ಯುವರಾಜ್ ಸಿಂಗ್ ಬಳಿಕ ವಿಶ್ವಕಪ್ ಪಂದ್ಯವೊಂದರಲ್ಲಿ ಅರ್ಧಶತಕ ಹಾಗೂ 5 ವಿಕೆಟ್ ಪಡೆದ ವಿಶ್ವದ 2ನೇ ಆಲ್‌ರೌಂಡರ್ ಶಾಕಿಬ್.

 ಗೆಲ್ಲಲು 263 ರನ್ ಗುರಿ ಪಡೆದ ಅಫ್ಘಾನ್ 47 ಓವರ್‌ಗಳಲ್ಲಿ 200 ರನ್‌ಗೆ ಆಲೌಟಾಯಿತು. ತಂಡದ ಪರ ನಾಯಕ ಸಮಿವುಲ್ಲಾ ಶಿನ್ವಾರಿ (ಔಟಾಗದೆ 49 ರನ್)ಸರ್ವಾಧಿಕ ಸ್ಕೋರ್ ಗಳಿಸಿದರು.

 ನಾಯಕ ಗುಲ್ಬದ್ದೀನ್ ನೈಬ್(47), ರಹ್ಮತ್ ಶಾ(24), ನಜೀಬುಲ್ಲಾ ಝದ್ರಾನ್(23), ಅಸ್ಘರ್ ಅಫ್ಘಾನ್ (20) ಎರಡಂಕೆಯ ಸ್ಕೋರ್ ಗಳಿಸಿದರು.

ಇದಕ್ಕೂ ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಬಾಂಗ್ಲಾದೇಶ ತಂಡ ಹಿರಿಯ ಆಟಗಾರ ಮುಶ್ಫಿಕುರ್ರಹೀಂ ತಾಳ್ಮೆಯ ಅರ್ಧಶತಕ(83, 87 ಎಸೆತ)ಸಹಾಯದಿಂದ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 262 ರನ್ ಗಳಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News