×
Ad

ಹಾಂಕಾಂಗ್ ವಿಷಯ ಪ್ರಸ್ತಾಪಿಸುವಂತೆ ಜಿ20 ನಾಯಕರಿಗೆ ಆಗ್ರಹ

Update: 2019-06-26 22:49 IST

 ಹಾಂಕಾಂಗ್, ಜೂ. 26: ಹಾಂಕಾಂಗ್ ಜನರ ಬವಣೆಯನ್ನು ಚೀನಾ ಬಳಿ ಪ್ರಸ್ತಾಪಿಸುವಂತೆ ಹಾಗೂ ಹಾಂಕಾಂಗ್‌ನ ವಿವಾದಾಸ್ಪದ ಗಡಿಪಾರು ಮಸೂದೆಯನ್ನು ಸಂಪೂರ್ಣವಾಗಿ ಹಿಂದಕ್ಕೆ ಪಡೆಯುವಂತೆ ಒತ್ತಡ ಹೇರುವಂತೆ ಜಿ20 ಶೃಂಗಸಭೆಯಲ್ಲಿ ಭಾಗವಹಿಸಲಿರುವ ನಾಯಕರನ್ನು ಒತ್ತಾಯಿಸಿ ಸಾವಿರಾರು ಮಂದಿ ಬುಧವಾರ ಹಾಂಕಾಂಗ್‌ನಲ್ಲಿರುವ ಪ್ರಮುಖ ದೇಶಗಳ ಕೌನ್ಸುಲೇಟ್ ಕಚೇರಿಗಳ ಎದುರು ಧರಣಿ ನಡೆಸಿದರು.

ಹಾಂಕಾಂಗ್‌ನ ಆರೋಪಿಗಳನ್ನು ವಿಚಾರಣೆಗಾಗಿ ಚೀನಾಕ್ಕೆ ಗಡಿಪಾರು ಮಾಡಲು ಅವಕಾಶ ನೀಡುವ ಮಸೂದೆಯನ್ನು ವಿರೋಧಿಸಿ ಹಾಂಕಾಂಗ್ ನಿವಾಸಿಗಳು ಮೂರು ವಾರಗಳಿಂದ ಬೃಹತ್ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.

ಜಪಾನ್ ನಗರ ಒಸಾಕದಲ್ಲಿ ಶುಕ್ರವಾರ ಮತ್ತು ಶನಿವಾರ ಜಿ20 ಶೃಂಗಸಭೆ ನಡೆಯಲಿದೆ.

‘‘ಸರಕಾರ ಮಸೂದೆಯನ್ನು ಹಿಂದಕ್ಕೆ ಪಡೆಯುವವರೆಗೆ ಹಾಗೂ ಸ್ಪಂದಿಸುವವರೆಗೆ ನಾವು ಹೋರಾಟ ನಡೆಸುತ್ತಲೇ ಇರುತ್ತೇವೆ’’ ಎಂದು ವಿದ್ಯಾರ್ಥಿಯೊಬ್ಬರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News