×
Ad

ಟ್ರಂಪ್ ಮಗನ ಮುಖಕ್ಕೆ ಉಗಿದ ಬಾರ್ ಪರಿಚಾರಕಿಗೆ ರಜೆ

Update: 2019-06-27 23:40 IST

ಶಿಕಾಗೊ, ಜೂ. 27: ಶಿಕಾಗೊ ನಗರದ ಬಾರೊಂದರ ಪರಿಚಾರಕಿಯೊಬ್ಬರು ತನ್ನ ಮೇಲೆ ಉಗಿದಿದ್ದಾರೆ ಎಂಬುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಮಗ ಎರಿಕ್ ಟ್ರಂಪ್ ಆರೋಪಿಸಿದ ಬಳಿಕ, ಪರಿಚಾರಕಿಯನ್ನು ರಜೆಯಲ್ಲಿ ಕಳುಹಿಸಲಾಗಿದೆ.

ಶಿಕಾಗೊದ ವೆಸ್ಟ್ ಸೈಡ್‌ನಲ್ಲಿರುವ ವಿಲಾಸಿ ಬಾರ್ ‘ಏವಿಯರಿ’ಯಲ್ಲಿ ಎರಿಕ್ ಟ್ರಂಪ್ ಮಂಗಳವಾರ ರಾತ್ರಿ ‘ಬಿಸ್ನೆಸ್ ಡಿನ್ನರ್’ ಏರ್ಪಡಿಸಿದ್ದರು. ಆಗ ಪರಿಚಾರಕಿಯು ಅವರ ಮುಖದ ಮೇಲೆ ಉಗಿದಿದ್ದಾರೆ ಎಂದು ಟ್ರಂಪ್ ಆರ್ಗನೈಸೇಶನ್‌ನ ವಕ್ತಾರರೊಬ್ಬರು ಹೇಳಿರುವುದಾಗಿ ‘ಶಿಕಾಗೊ ಟ್ರಿಬ್ಯೂನ್’ ವರದಿ ಮಾಡಿದೆ.

‘‘ಇದು ಖಚಿತ ಭಾವನಾತ್ಮಕ ಸಮಸ್ಯೆಗಳನ್ನು ಹೊಂದಿರುವ ವ್ಯಕ್ತಿ ನಡೆಸಿರುವ ಅಸಹ್ಯಕರ ಕೃತ್ಯ’’ ಎಂದು ಎರಿಕ್ ಟ್ರಂಪ್ ‘ಬ್ರೇಟ್‌ಬಾರ್ಟ್ ನ್ಯೂಸ್’ಗೆ ಹೇಳಿದ್ದಾರೆ.

ಅಧಿಕಾರಿಗಳು ಮಹಿಳೆಯನ್ನು ವಶಕ್ಕೆ ಪಡೆದುಕೊಂಡಿದ್ದರು, ಆದರೆ ಮಹಿಳೆಯ ವಿರುದ್ಧ ದೂರು ಸಲ್ಲಿಸದಿರಲು ಅಧ್ಯ ಕ್ಷರ ಮಗ ನಿರ್ಧರಿಸಿದರು ಎಂದು ಟ್ರಂಪ್ ಆರ್ಗನೈಸೇಶನ್ ‘ಟ್ರಿಬ್ಯೂನ್’ಗೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News