ಆಫ್ರಿಕದ ಸಂಘಟಿತ ದಾಳಿಗೆ ಬೆದರಿದ ಲಂಕಾ: 203ಕ್ಕೆ ಆಲೌಟ್
Update: 2019-06-28 19:01 IST
ಮಾಂಚೆಸ್ಟರ್, ಜೂ.28: ದಕ್ಷಿಣ ಆಫ್ರಿಕ ವಿರುದ್ಧ ಶ್ರೀಲಂಕಾ ತಂಡ ವಿಶ್ವಕಪ್‌ನ 35ನೇ ಪಂದ್ಯದಲ್ಲಿ 49.3 ಓವರ್‌ಗಳಲ್ಲಿ 203 ರನ್‌ಗಳಿಗೆ ಆಲೌಟಾಗಿದೆ.
ಆಫ್ರಿಕದ ಬೌಲರ್‌ಗಳ ಸಂಘಟಿತ ದಾಳಿಗೆ ಸಿಲುಕಿದ ಶ್ರೀಲಂಕಾ ಕಡಿಮೆ ಮೊತ್ತಕ್ಕೆ ತನ್ನ ಇನಿಂಗ್ಸ್ ಮುಗಿಸಿದೆ.
ಲಂಕಾದ ಪರ ವಿಕೆಟ್ ಕೀಪರ್ ಕುಸಾಲ್ ಪೆರೆರಾ(30) ಮತ್ತು ಆವಿಶ್ಕಾ ಫೆರ್ನಾಂಡೊ (30)ಗಳಿಸಿರುವುದು ತಂಡದ ಪರ ದಾಖಲಾದ ಗರಿಷ್ಠ ವೈಯಕ್ತಿಕಕ ಸ್ಕೋರ್ ಆಗಿದೆ.
ಆಫ್ರಿಕದ ಡಿ. ಪ್ರಿಟೋರಿಯಸ್ ಮತ್ತು ಕ್ರಿಸ್ ಮೊರಿಸ್ ತಲಾ 3 ವಿಕೆಟ್, ಕಾಗಿಸೊ ರಬಾಡ 2 ವಿಕೆಟ್ ಪಡೆದರು. ಟಾಸ್ ಜಯಿಸಿದ ದಕ್ಷಿಣ ಆಫ್ರಿಕ ಫೀಲ್ಡಿಂಗ್ ಆಯ್ದುಕೊಂಡಿತ್ತು.