ಏಕದಿನ ಕ್ರಿಕೆಟ್‌ನಲ್ಲಿ ಚೊಚ್ಚಲ ಐದು ವಿಕೆಟ್ ಗೊಂಚಲು ಪಡೆದ ಶಮಿ

Update: 2019-06-30 14:55 GMT

ಬರ್ಮಿಂಗ್‌ಹ್ಯಾಮ್, ಜೂ.30: ಭಾರತದ ವೇಗದ ಬೌಲರ್ ಮುಹಮ್ಮದ್ ಶಮಿ ವಿಶ್ವಕಪ್ ಪಂದ್ಯದಲ್ಲಿ ಇಂಗ್ಲೆಂಡ್‌ನ ಅಬ್ಬರದ ಬ್ಯಾಟಿಂಗ್ ನಡುವೆಯೂ ವೃತ್ತಿಜೀವನದಲ್ಲಿ ಮೊದಲ ಬಾರಿ ಐದು ವಿಕೆಟ್ ಗುಚ್ಛ ಪಡೆದು ಮಿಂಚಿದ್ದಾರೆ.

ಶಮಿ ಇಂಗ್ಲೆಂಡ್‌ನ ಶತಕವೀರ ಬೈರ್‌ಸ್ಟೋವ್, ರೂಟ್, ನಾಯಕ ಮೊರ್ಗನ್, ಜೋಸ್ ಬಟ್ಲರ್ ಹಾಗೂ ಕ್ರಿಸ್ ವೋಕ್ಸ್ ವಿಕೆಟನ್ನು ಪಡೆದು ಇಂಗ್ಲೆಂಡ್ ತಂಡವನ್ನು 350ರ ಒಳಗೆ ನಿಯಂತ್ರಿಸಲು ನೆರವಾದರು.

ಶಮಿ ಕಳೆದ ಎರಡು ಪಂದ್ಯಗಳಲ್ಲಿ ತಲಾ 4 ವಿಕೆಟ್‌ಗಳನ್ನು ಪಡೆದರು.ಇದರಲ್ಲಿ ಅಫ್ಘಾನ್ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಕೂಡ ಸೇರಿದೆ. ಇಂಗ್ಲೆಂಡ್ ವಿರುದ್ಧ 69ಕ್ಕೆ 5 ವಿಕೆಟ್‌ಗಳನ್ನು ಉರುಳಿಸಿರುವ ಶಮಿ ವಿಶ್ವಕಪ್‌ನಲ್ಲಿ ಈತನಕ ಆಡಿರುವ 3 ಪಂದ್ಯಗಳಲ್ಲಿ ಒಟ್ಟು 14 ವಿಕೆಟ್‌ಗಳನ್ನು ಪಡೆದಿದ್ದಾರೆ.

 ಭುವನೇಶ್ವರ ಕುಮಾರ್ ಗಾಯಗೊಂಡ ಹಿನ್ನೆಲೆಯಲ್ಲಿ ಶಮಿ ಆಡುವ 11ರ ಬಳಗವನ್ನು ಸೇರಿಕೊಂಡಿದ್ದರು. ಅಫ್ಘಾನ್ ವಿರುದ್ಧ ವಿಶ್ವಕಪ್ ಪಂದ್ಯದ ಕೊನೆಯ ಓವರ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು. ಈ ವರ್ಷದ ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಬೌಲರ್ ಎನಿಸಿಕೊಂಡಿರುವ 28ರ ಹರೆಯದ ಶಮಿ, ಚೇತನ್ ಶರ್ಮಾ ಬಳಿಕ ವಿಶ್ವಕಪ್‌ನಲ್ಲಿ ಈ ಸಾಧನೆ ಮಾಡಿದ ಭಾರತದ 2ನೇ ಬೌಲರ್ ಆಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News