ವಿಶ್ವಕಪ್: ಬಾಂಗ್ಲಾಕ್ಕೆ 315 ರನ್ ಸವಾಲು ನೀಡಿದ ಭಾರತ

Update: 2019-07-02 14:29 GMT

ಬರ್ಮಿಂಗ್‌ಹ್ಯಾಮ್,ಜು.2: ಭಾರತ ತಂಡ ಮೊದಲ ವಿಕೆಟ್‌ಗೆ ಭರ್ಜರಿ ಜೊತೆಯಾಟ ನಡೆಸಿದ ಹೊರತಾಗಿಯೂ ಬಾಂಗ್ಲಾದೇಶ ವಿರುದ್ಧ ವಿಶ್ವಕಪ್ ಪಂದ್ಯದಲ್ಲಿ 50 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 314 ರನ್ ಗಳಿಸಿತು.

ಟಾಸ್ ಜಯಿಸಿದ ಭಾರತ ನಾಯಕ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಮೊದಲ ವಿಕೆಟ್ ಜೊತೆಯಾಟದಲ್ಲಿ 180 ರನ್ ಗಳಿಸಿದ ರೋಹಿತ್ ಶರ್ಮಾ(104) ಹಾಗೂ ಕೆಎಲ್ ರಾಹುಲ್ (77)ಭಾರತಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು.

ಆದರೆ, ಈ ಇಬ್ಬರು ಔಟಾದ ಬಳಿಕ ಉಳಿದ ದಾಂಡಿಗರಿಂದ ದೊಡ್ಡ ಮೊತ್ತ ದಾಖಲಾಗಲಿಲ್ಲ. ಬಾಂಗ್ಲಾದ ವೇಗದ ಬೌಲರ್ ಮುಸ್ತಫಿಝರ್ರಹ್ಮಾನ್(5-59)ಭಾರತದ ರನ್ ವೇಗಕ್ಕೆ ಕಡಿವಾಣ ಹಾಕಿದರು.

ರಿಷಭ್ ಪಂತ್ 48 ರನ್, ಧೋನಿ 35 ರನ್ ಗಳಿಸಿದರು. ವಿರಾಟ್ ಕೊಹ್ಲಿ 26 ರನ್ ಗಳಿಸಿ ಔಟಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News