ವಿಶ್ವಕಪ್: ಇಂಗ್ಲೆಂಡ್ ಸೆಮಿ ಫೈನಲ್‌ಗೆ

Update: 2019-07-03 17:21 GMT

 ಚೆಸ್ಟರ್‌ಲೀ ಸ್ಟ್ರೀಟ್, ಜು.3: ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಟಾಮ್ ಲಥಾಮ್(52 ರನ್, 57 ಎಸೆತ)ಏಕಾಂಗಿ ಹೋರಾಟದ ಹೊರತಾಗಿಯೂ ನ್ಯೂಝಿಲ್ಯಾಂಡ್ ತಂಡ ಬುಧವಾರ ನಡೆದ ನಿರ್ಣಾಯಕ ವಿಶ್ವಕಪ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 119 ರನ್‌ಗಳಿಂದ ಸೋಲುಂಡಿದೆ.

ಗೆಲ್ಲಲು 306 ರನ್ ಗುರಿ ಪಡೆದಿದ್ದ ನ್ಯೂಝಿಲ್ಯಾಂಡ್ ಹೆಚ್ಚು ಹೋರಾಟ ನೀಡದೆ 45 ಓವರ್‌ಗಳಲ್ಲಿ 186 ರನ್‌ಗಳಿಗೆ ಆಲೌಟಾಯಿತು.

ಭರ್ಜರಿ ಜಯ ಸಾಧಿಸಿರುವ ಇಂಗ್ಲೆಂಡ್ 9 ಪಂದ್ಯಗಳಲ್ಲಿ 12 ಅಂಕ ಗಳಿಸಿ ಸೆಮಿ ಫೈನಲ್‌ಗೆ ಪ್ರವೇಶಿಸಿದ ಮೂರನೇ ತಂಡ ಎನಿಸಿಕೊಂಡಿತು.

ಇನಿಂಗ್ಸ್‌ನ ಆರನೇ ಓವರ್‌ನಲ್ಲಿ 14 ರನ್‌ಗೆ 2 ವಿಕೆಟ್‌ಗಳನ್ನು ಕಳೆದುಕೊಂಡ ಕಿವೀಸ್ ಆ ಬಳಿಕ ಚೇತರಿಸಿಕೊಳ್ಳಲಿಲ್ಲ. 57 ಎಸೆತಗಳಲ್ಲಿ 4 ಬೌಂಡರಿಗಳ ನೆರವನಿಂದ 15ನೇ ಅರ್ಧಶತಕ ದಾಖಲಿಸಿದ ಲಥಾಮ್ ಒಂದಷ್ಟು ಪ್ರತಿರೋಧ ಒಡ್ಡಿದರು.

ನಾಯಕ ವಿಲಿಯಮ್ಸನ್(27) ಹಾಗೂ ರಾಸ್ ಟೇಲರ್(28)ರನ್ ಕದಿಯಲು ಹೋಗಿ ರನೌಟಾದರು.

ಇಂಗ್ಲೆಂಡ್‌ನ ಪರ ಮಾರ್ಕ್ ವುಡ್(3-34)ಯಶಸ್ವಿ ಬೌಲರ್ ಎನಿಸಿಕೊಂಡರು. ವೇಗದ ಬೌಲರ್ ಅರ್ಚರ್ ವಿಶ್ವಕಪ್‌ನಲ್ಲಿ ಗರಿಷ್ಠ ವಿಕೆಟ್‌ಗಳನ್ನು(17)ಉರುಳಿಸಿದ ಇಂಗ್ಲೆಂಡ್‌ನ ಮೊದಲ ಬೌಲರ್

ಇದಕ್ಕೂ ಮೊದಲು ಟಾಸ್ ಜಯಿಸಿದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು

 ಆರಂಭಿಕ ಆಟಗಾರರಾದ ಜಾನಿ ಬೈರ್‌ಸ್ಟೋವ್ ಗಳಿಸಿದ ಸತತ ಎರಡನೇ ಶತಕ(106, 99 ಎಸೆತ) ಹಾಗೂ ಜೇಸನ್ ರಾಯ್(60)ಅರ್ಧಶತಕದ ಕೊಡುಗೆ ನೆರವಿನಿಂದ ನಿರ್ಣಾಯಕ ವಿಶ್ವಕಪ್ ಪಂದ್ಯದಲ್ಲಿ 50 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 305 ರನ್ ಗಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News