ವಿಶ್ವಕಪ್: ವೆಸ್ಟ್‌ಇಂಡೀಸ್ 311/6

Update: 2019-07-04 13:16 GMT

 ಲೀಡ್ಸ್, ಜು.4: ಅಗ್ರ ಸರದಿಯ ದಾಂಡಿಗರಾದ ಶೈ ಹೋಪ್(77,92 ಎಸೆತ), ಲೂವಿಸ್(58,78 ಎಸೆತ) ಹಾಗೂ ಪೂರನ್(58,43 ಎಸೆತ)ಅರ್ಧಶತಕದ ಕೊಡುಗೆಯ ನೆರವಿನಿಂದ ವೆಸ್ಟ್‌ಇಂಡೀಸ್ ತಂಡ ಅಫ್ಘಾನಿಸ್ತಾನ ವಿರುದ್ಧ ವಿಶ್ವಕಪ್‌ನ 42ನೇ ಪಂದ್ಯದಲ್ಲಿ 50 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 311 ರನ್ ಗಳಿಸಿದೆ.

ಟಾಸ್ ಜಯಿಸಿದ ವೆಸ್ಟ್‌ಇಂಡೀಸ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ನಾಯಕ ಹೋಲ್ಡರ್(45) ಹಾಗೂ ಹೆಟ್ಮೆಯರ್(39)ಎರಡಂಕೆಯ ಸ್ಕೋರ್ ಗಳಿಸಿದರು.

ಅಫ್ಘಾನ್ ಪರ ಝದ್ರಾನ್(2-73)ಯಶಸ್ವಿ ಬೌಲರ್ ಎನಿಸಿಕೊಂಡರು.

ಉಭಯ ತಂಡಗಳು ವಿಶ್ವಕಪ್‌ನ ಸೆಮಿ ಫೈನಲ್ ರೇಸ್‌ನಿಂದ ಹೊರಗುಳಿದಿದ್ದು, ಕೇವಲ ಪ್ರತಿಷ್ಠೆಗಾಗಿ ಆಡುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News