ವಿಶ್ವಕಪ್ ನಿಂದ ಪಾಕ್ ಔಟ್

Update: 2019-07-05 14:26 GMT

ಲಂಡನ್ , ಜು.8: ಶುಕ್ರವಾರದ ಪಂದ್ಯದಲ್ಲಿ ಬಾಂಗ್ಲಾದೇಶ ಪಾಕ್ ವಿರುದ್ಧ 7 ರನ್ ದಾಖಲಿಸುತ್ತಲೇ ಪಾಕ್ ತಂಡ ಅಧಿಕೃತವಾಗಿ ವಿಶ್ವಕಪ್ ನಿಂದ ಹೊರಬಿದ್ದಿದೆ.

ಸೆಮಿಫೈನಲ್ ತಲುಪಲು ಪಾಕ್ ತಂಡ ಬಾಂಗ್ಲಾ ವಿರುದ್ಧ ಕನಿಷ್ಠ 308 ರನ್ ಗಳ ಅಂತರದಿಂದ ಗೆಲ್ಲಬೇಕಿತ್ತು. ಆದರೆ ಪಾಕ್ ಮೊದಲು ಬ್ಯಾಟಿಂಗ್ ಮಾಡಿ 315 ರನ್ ದಾಖಲಿಸಿದೆ. ಅದಕ್ಕುತ್ತರವಾಗಿ ಬ್ಯಾಟಿಂಗ್ ಮಾಡುತ್ತಿರುವ ಬಾಂಗ್ಲಾ ತಂಡ ಈಗಾಗಲೇ 33 ರನ್ ಮಾಡಿದೆ. ಹಾಗಾಗಿ ಇನ್ನು ಪಾಕ್ ಗೆದ್ದರೂ ವಿಶ್ವ ಕಪ್ ಸೆಮಿಫೈನಲ್ ತಲುಪುವುದಿಲ್ಲ.

ಇದರೊಂದಿಗೆ ನ್ಯೂಝಿಲ್ಯಾಂಡ್ ಸೆಮಿಫೈನಲ್ ತಲುಪಿದೆ. ಭಾರತ, ಆಸೀಸ್ ಹಾಗು ಇಂಗ್ಲೆಂಡ್ ತಂಡಗಳು ಈಗಾಗಲೇ ಸೆಮಿಫೈನಲ್ ಸ್ಥಾನ ಖಚಿತಪಡಿಸಿಕೊಂಡಿವೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News