ವಿಶ್ವಕಪ್: ಲಂಕಾವನ್ನು ಮಣಿಸಿದ ಭಾರತ

Update: 2019-07-06 17:08 GMT

ಲೀಡ್ಸ್, ಜು.6: ಶ್ರೀಲಂಕಾ ವಿರುದ್ಧ ವಿಶ್ವಕಪ್‌ನ ಅಂತಿಮ ಲೀಗ್ ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮಾ ಮತ್ತು ಲೋಕೇಶ್ ರಾಹುಲ್ ಶತಕದ ನೆರವಿನಲ್ಲಿ ಭಾರತ 7 ವಿಕೆಟ್‌ಗಳ ಜಯ ಗಳಿಸಿದೆ.

  ಗೆಲುವಿಗೆ 265 ರನ್‌ಗಳ ಸವಾಲನ್ನು ಪಡೆದ ಭಾರತ ಇನ್ನೂ 39 ಎಸೆತಗಳು ಬಾಕಿ ಇರುವಾಗಲೇ 3 ವಿಕೆಟ್ ನಷ್ಟದಲ್ಲಿ ಗೆಲುವಿಗೆ ಅಗತ್ಯದ ರನ್ ದಾಖಲಿಸಿತು. ರೋಹಿತ್ ವಿಶ್ವಕಪ್‌ನಲ್ಲಿ 5ನೇ ಶತಕ ದಾಖಲಿಸಿದರು. ಇದು ಏಕದಿನ ಕ್ರಿಕೆಟ್‌ನಲ್ಲಿ ಅವರ 27ನೇ ಶತವಾಗಿದೆ. ರಾಹುಲ್ ವಿಶ್ವಕಪ್‌ನಲ್ಲಿ ಮೊದಲ ಮತ್ತು ಏಕದಿನ ಕ್ರಿಕೆಟ್‌ನಲ್ಲಿ 2ನೇ ಶತಕ ದಾಖಲಿಸಿದರು. ರಾಹುಲ್ 111 ರನ್ (118ಎ, 11ಬೌ,1ಸಿ) ಮತ್ತು ರಿಷಭ್ ಪಂತ್ 4 ರನ್ ಗಳಿಸಿ ಔಟಾದರು. ನಾಯಕ ಕೊಹ್ಲಿ 34 ರನ್ ಮತ್ತು ಹಾರ್ದಿಕ್ ಪಾಂಡ್ಯ 7 ರನ್ ಗಳಿಸ ಔಟಾಗದೆ ಉಳಿದರು. ರೋಹಿತ್ ಶರ್ಮಾ 103 ರನ್(94ಎ, 14ಬೌ,2ಸಿ) ಗಳಿಸಿ ಔಟಾಗಿದ್ದಾರೆ. ರೋಹಿತ್ ಮತ್ತು ರಾಹುಲ್ ಮೊದಲ ವಿಕೆಟ್‌ಗೆ 189 ರನ್‌ಗಳ ಜೊತೆಯಾಟ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News