ಸೆಮಿ ಫೈನಲ್ : ಧೋನಿ ಐತಿಹಾಸಿಕ ಸಾಧನೆ

Update: 2019-07-09 09:48 GMT

ಮ್ಯಾಂಚೆಸ್ಟರ್, ಜು.9: ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನ್ಯೂಝಿಲ್ಯಾಂಡ್ ವಿರುದ್ಧ ಮಂಗಳವಾರ ವಿಶ್ವಕಪ್‌ನ ಸೆಮಿ ಫೈನಲ್ ಪಂದ್ಯವನ್ನಾಡುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಧೋನಿ ಅವರು ಸಚಿನ್ ತೆಂಡುಲ್ಕರ್ ಬಳಿಕ 350 ಏಕದಿನ ಪಂದ್ಯಗಳನ್ನು ಆಡಿದ ಭಾರತದ ಎರಡನೇ ಆಟಗಾರನಾಗಿದ್ದಾರೆ. ಧೋನಿ ಕಿವೀಸ್ ವಿರುದ್ಧ ಪಂದ್ಯಕ್ಕಿಂತ ಮೊದಲು 349 ಪಂದ್ಯಗಳನ್ನು ಆಡಿದ್ದು, ಭಾರತದ ಪರ 346 ಹಾಗೂ ಏಶ್ಯಾ ಇಲೆವೆನ್ ಪರ 3 ಪಂದ್ಯ ಆಡಿದ್ದಾರೆ.

ವಿಶ್ವ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ 10ನೇ ಕ್ರಿಕೆಟಿಗನಾಗಿದ್ದಾರೆ. ಧೋನಿ 350 ಏಕದಿನ ಪಂದ್ಯಗಳನ್ನು ಆಡಿದ ಮೊದಲ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಆಗಿದ್ದಾರೆ. ಶ್ರೀಲಂಕಾದ ಕುಮಾರ ಸಂಗಕ್ಕರ ಈತನಕ ಕೀಪರ್ ಆಗಿ 360 ಪಂದ್ಯಗಳನ್ನು ಆಡಿದ್ದಾರೆ. ಆದರೆ ಅವರು 44 ಪಂದ್ಯಗಳಲ್ಲಿ ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್ ಕೂಡ ಆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News