7 ಬಾರಿಯ ಚಾಂಪಿಯನ್ ಸೆರೆನಾರನ್ನು ಮಣಿಸಿ ವಿಂಬಲ್ಡನ್ ಗೆದ್ದ ಸಿಮೋನಾ

Update: 2019-07-13 14:36 GMT

ಲಂಡನ್, ಜು.13: 7 ಬಾರಿಯ ಚಾಂಪಿಯನ್ ಸೆರೆನಾ ವಿಲಿಯಮ್ಸ್ ರನ್ನು ಮಣಿಸುವ ಮೂಲಕ ರೊಮಾನಿಯನ್ ಟೆನ್ನಿಸ್ ತಾರೆ ಸಿಮೋನಾ ಹಾಲೆಪ್ ಚೊಚ್ಚಲ ವಿಂಬಲ್ಡನ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಶನಿವಾರ ನಡೆದ ಪಂದ್ಯದಲ್ಲಿ ಸಿಮೋನಾ ಸೆರೆನಾರನ್ನು 6-2, 6-2 ಸೆಟ್ ಗಳಿಂದ ಮಣಿಸಿದರು.

2018ರಲ್ಲಿ ಫ್ರೆಂಚ್ ಓಪನ್ ಗೆದ್ದ ನಂತರ ಸಿಮೋನಾ ಅವರಿಗೆ ಇದು 2ನೆ ಗ್ರ್ಯಾಂಡ್ ಸ್ಲ್ಯಾಮ್ ಟೈಟಲ್ ಆಗಿದೆ. ಆರಂಭದಿಂದಲೂ ಪಂದ್ಯದಲ್ಲಿ ಹಿಡಿತ ಸಾಧಿಸಿದ್ದ ಸಿಮೋನಾ ಮುಂದೆ ಸೆರೆನಾ ಸೋಲೊಪ್ಪಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News