ಎರಡು ವಾರದೊಳಗೆ ಮೂರನೇ ಚಿನ್ನ ಜಯಿಸಿದ ಹಿಮಾ ದಾಸ್

Update: 2019-07-13 18:23 GMT

ಹೊಸದಿಲ್ಲಿ : ಝೆಕ್ ಗಣರಾಜ್ಯದ ಕ್ಲಾಡ್ನೊದಲ್ಲಿ ನಡೆದ ಕ್ಲಾಡ್ನೊ ಸ್ಮಾರಕ ಅಥ್ಲೆಟಿಕ್ಸ್ ಕೂಟದಲ್ಲಿ ಭಾರತದ ಓಟಗಾರ್ತಿ ಹಿಮಾ ದಾಸ್ ಮಹಿಳೆಯರ 200 ಮೀ. ಓಟದ ಸ್ಪರ್ಧೆಯಲ್ಲಿ ಚಿನ್ನ ಜಯಿಸಿದರು. ಎರಡು ವಾರದೊಳಗೆ ಹಿಮಾ ಜಯಿಸಿದ ಮೂರನೇ ಅಂತರ್‌ ರಾಷ್ಟ್ರೀಯ ಚಿನ್ನದ ಪದಕ ಇದಾಗಿದೆ.

ಹಿಮಾ 23.43 ಸೆಕೆಂಡ್‌ನಲ್ಲಿ ಗುರಿ ತಲುಪಿ ಚಿನ್ನದ ಪದಕ ತನ್ನದಾಗಿಸಿಕೊಂಡರು.

 ಜು. 2 ರಂದು ಪೊಲ್ಯಾಂಡ್‌ನಲ್ಲಿ ನಡೆದಿದ್ದ ಪೋಝ್ನಾನ್ ಅಥ್ಲೆಟಿಕ್ಸ್ ಕೂಟದಲ್ಲಿ 23.65 ಸೆಕೆಂಡ್‌ನಲ್ಲಿ ಗುರಿ ತಲುಪಿ 200 ಮೀ. ಓಟದಲ್ಲಿ ಈ ವರ್ಷದ ಮೊದಲ ಚಿನ್ನ ಜಯಿಸಿದ್ದರು. ಆ ಬಳಿಕ ರವಿವಾರ ಪೊಲ್ಯಾಂಡ್‌ನಲ್ಲಿ ನಡೆದ ಕುಟ್ನೊ ಅಥ್ಲೆಟಿಕ್ಸ್ ಕೂಟದಲ್ಲಿ 23.97 ಸೆಕೆಂಡ್‌ನಲ್ಲಿ ಗುರಿ ತಲುಪಿ ಎರಡನೇ ಚಿನ್ನ ಜಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News