​ಎರಡು ಚಿನ್ನದೊಂದಿಗೆ ಭಾರತದ ಅಭಿಯಾನ ಆರಂಭ

Update: 2019-07-13 18:50 GMT

ಹೊಸದಿಲ್ಲಿ, ಜು.13: ಜರ್ಮನಿಯಲ್ಲಿ ಶನಿವಾರ ಆರಂಭವಾದ ಜೂನಿಯರ್ ಶೂಟಿಂಗ್ ವಿಶ್ವಕಪ್‌ನಲ್ಲಿ ಉದಯವೀರ್ ಸಿಧು ಎರಡು ಚಿನ್ನದ ಪದಕವನ್ನು ಬಾಚಿಕೊಂಡರು. ಮೊದಲ ದಿನವೇ ಭಾರತ ಪದಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ.

ಜೂನಿಯರ್ ಪುರುಷರ 25 ಮೀ. ಸ್ಟಾಂಡರ್ಡ್ ಪಿಸ್ತೂಲ್ ಸ್ಪರ್ಧೆಯಲ್ಲಿ ಉದಯವೀರ್ 575 ಶಾಟ್ ಹೊಡೆದರು.ಭಾರತದ ಆದರ್ಶ್ ಸಿಂಗ್(568) ಹಾಗೂ ಅನಿಶ್ ಭನ್ವಾಲ(566)ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಜಯಿಸಿದರು.

ಉದಯವೀರ್, ಆದರ್ಶ್ ಹಾಗೂ ತನ್ನ ಸಹೋದರ ವಿಜಯವೀರ್ ಸಿಧು ಜೊತೆಗೂಡಿ ಟೀಮ್ ಇವೆಂಟ್‌ನಲ್ಲಿ 1707 ಅಂಕ ಗಳಿಸಿ ಮೊದಲ ಸ್ಥಾನ ಪಡೆದರು. ಇದು ಜೂನಿಯರ್ ವಿಶ್ವಕಪ್‌ನಲ್ಲಿ ದಾಖಲೆಯಾಗಿದೆ.

ಅನೀಶ್, ರಾಜ್‌ಕನ್ವರ್ ಸಂಧು ಹಾಗೂ ದಿಲ್ಶನ್ ಕೆಲ್ಲಿ ಅವರನ್ನೊಳಗೊಂಡ ಭಾರತದ ಮತ್ತೊಂದು ತಂಡ ಒಟ್ಟು 1676 ಅಂಕ ಗಳಿಸಿ ಎರಡನೇ ಸ್ಥಾನ ಪಡೆಯಿತು. ವಿಶ್ವಕಪ್‌ನ ಮೊದಲ ದಿನದ ಸ್ಪರ್ಧೆಯಲ್ಲಿ ಭಾರತ 2 ಚಿನ್ನ, 2 ಬೆಳ್ಳಿ ಹಾಗೂ ಒಂದು ಕಂಚು ಸಹಿತ ಒಟ್ಟು 5 ಪದಕಗಳನ್ನು ಜಯಿಸಿದೆ. ತಲಾ ಒಂದು ಚಿನ್ನ ಜಯಿಸಿರುವ ಚೀನಾ ಹಾಗೂ ಥಾಯ್ಲೆಂಡ್ ಎರಡು ಹಾಗೂ ಮೂರನೇ ಸ್ಥಾನದಲ್ಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News