ನೇಪಾಳ: ಪ್ರವಾಹ, ಭೂಕುಸಿತದಿಂದ ಮೃತರ ಸಂಖ್ಯೆ 67ಕ್ಕೆ ಏರಿಕೆ

Update: 2019-07-16 16:05 GMT

ಕಠ್ಮಂಡು (ನೇಪಾಳ), ಜು. 16: ನೇಪಾಳದಲ್ಲಿ ಪ್ರವಾಹ ಮತ್ತು ಭೂಕುಸಿತಗಳಿಂದಾಗಿ ಮೃತಪಟ್ಟವರ ಸಂಖ್ಯೆ 67ಕ್ಕೇರಿದೆ ಹಾಗೂ 40ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ಹೇಳಿದ್ದಾರೆ.

32 ಮಂದಿ ನಾಪತ್ತೆಯಾಗಿದ್ದಾರೆ.

‘‘ವಿವಿಧ ಜಿಲ್ಲೆಗಳಲ್ಲಿ ಕನಿಷ್ಠ 1,445 ಜನರನ್ನು ರಕ್ಷಿಸಲಾಗಿದೆ ಹಾಗೂ ಅವರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಗಿದೆ’’ ಎಂದು ನೇಪಾಳಿ ಪೊಲೀಸರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ತೆರಾಯಿ ವಲಯ ಎಂಬುದಾಗಿ ಕರೆಯಲ್ಪಡುವ ತಗ್ಗು ಪ್ರದೇಶದಲ್ಲಿ ಕಾಣಿಸಿಕೊಂಡಿರುವ ಪ್ರವಾಹದಿಂದಾಗಿ ಸುಮಾರು 35,000 ಮಂದಿ ಸಂತ್ರಸ್ತರಾಗಿದ್ದಾರೆ ಎಂದು ನೇಪಾಳದ ಗೃಹ ಸಚಿವಾಲಯ ತಿಳಿಸಿದೆ.

ನೇಪಾಳದ 77 ಜಿಲ್ಲೆಗಳ ಪೈಕಿ 20ಕ್ಕೂ ಅಧಿಕ ಜಿಲ್ಲೆಗಳು ತೀವ್ರ ಬಾಧೆಗೊಳಗಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News