ಮರ್ಯಮ್ ನವಾಝ್ ವಿರುದ್ಧದ ಮೊಕದ್ದಮೆ ವಜಾ

Update: 2019-07-19 16:35 GMT

ಇಸ್ಲಾಮಾಬಾದ್, ಜು. 19: ಆ್ಯವನ್‌ಫೀಲ್ಡ್ ಅಪಾರ್ಟ್‌ಮೆಂಟ್ಸ್ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಝ್ ಶರೀಫ್ ಪುತ್ರಿ ಮರ್ಯಮ್ ನವಾಝ್ ನಕಲಿ ದಾಖಲೆ ಸಲ್ಲಿಸಿದ್ದಾರೆ ಎಂಬುದಾಗಿ ಆರೋಪಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯವೊಂದು ಶುಕ್ರವಾರ ತಳ್ಳಿಹಾಕಿದೆ.

ಪ್ರಕರಣದ ವಿಚಾರಣೆ ವೇಳೆ, ಪಾಕಿಸ್ತಾನ್ ಮುಸ್ಲಿಮ್ ಲೀಗ್ ನವಾಝ್ (ಪಿಎಂಎಲ್-ಎನ್) ಪಕ್ಷದ ಉಪಾಧ್ಯಕ್ಷೆ ಮರ್ಯಮ್ ನಕಲಿ ಟ್ರಸ್ಟ್ ಡೀಡ್ ಸಲ್ಲಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ದಾಖಲೆಯನ್ನು 2006ರಲ್ಲಿ ‘ಕ್ಯಾಲಿಬ್ರಿ’ ಫಾಂಟ್‌ನಲ್ಲಿ ಬರೆಯಲಾಗಿತ್ತು. ಆದರೆ, ಆಗ ಆ ಫಾಂಟ್ ಸಾರ್ವಜನಿಕ ಬಳಕೆಗೆ ಲಭ್ಯವಿರಲಿಲ್ಲ ಎಂಬುದಾಗಿ ನ್ಯಾಶನಲ್ ಅಕೌಂಟಬಿಲಿಟಿ ಬ್ಯೂರೋ ಆರೋಪಿಸಿತ್ತು.

ವಿಚಾರಣೆ ನಡೆಸಿದ ನ್ಯಾಯಾಧೀಶ ಮುಹಮ್ಮದ್ ಬಶೀರ್, ಮೊಕದ್ದಮೆಯನ್ನು ವಜಾಗೊಳಿಸಲಾಗಿದೆ ಎಂದು ಶುಕ್ರವಾರ ಘೋಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News