ಟರ್ಕಿ ವಿರುದ್ಧ ಸದ್ಯಕ್ಕೆ ಆರ್ಥಿಕ ದಿಗ್ಬಂಧನವಿಲ್ಲ: ಟ್ರಂಪ್

Update: 2019-07-19 16:50 GMT

ವಾಶಿಂಗ್ಟನ್, ಜು. 19: ಮಿತ್ರ ದೇಶ ಟರ್ಕಿಯು ರಶ್ಯದಿಂದ ಎಸ್-400 ಕ್ಷಿಪಣಿಗಳನ್ನು ಖರೀದಿಸಿರುವ ಹಿನ್ನೆಲೆಯಲ್ಲಿ, ಆ ದೇಶದ ವಿರುದ್ಧ ಸದ್ಯಕ್ಕೆ ಯಾವುದೇ ಆರ್ಥಿಕ ದಿಗ್ಬಂಧನಗಳನ್ನು ಹೇರುವ ಬಗ್ಗೆ ಪರಿಶೀಲಿಸಲಾಗುತ್ತಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್.

‘‘ನಾವು ಏನು ಮಾಡಬಹುದು ಎಂಬುದನ್ನು ಪರಿಶೀಲಿಸುತ್ತಿದ್ದೇವೆ. ಅದನ್ನು ನಾವು ಈವರೆಗೆ ಪ್ರಕಟಿಸಿಲ್ಲ’’ ಎಂದರು.

ಅಮೆರಿಕದ ಮನವಿಯನ್ನು ಧಿಕ್ಕರಿಸಿ ಟರ್ಕಿಯು ರಶ್ಯದಿಂದ ಬಲಶಾಲಿ ಕ್ಷಿಪಣಿಗಳನ್ನು ಖರೀದಿಸಿರುವ ಹಿನ್ನೆಲೆಯಲ್ಲಿ, ಎಫ್-35 ಅದೃಶ್ಯ ಯುದ್ಧವಿಮಾನಗಳ ಕಾರ್ಯಕ್ರಮದಿಂದ ಟರ್ಕಿಯನ್ನು ಹೊರಗಿಡಲಾಗುತ್ತಿದೆ ಎಂದು ಅಮೆರಿಕವು ಬುಧವಾರ ಹೇಳಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News