ಇರಾನ್ ಜೊತೆ ಸಂಪರ್ಕ: ಹಲವು ಕಂಪೆನಿಗಳಿಗೆ ದಿಗ್ಬಂಧನ

Update: 2019-07-19 17:31 GMT

ವಾಶಿಂಗ್ಟನ್, ಜು. 19: ಇರಾನ್‌ನ ಪರಮಾಣು ಸಂವರ್ಧನೆ ಕಾರ್ಯಕ್ರಮಕ್ಕೆ ಪೂರೈಕೆ ಜಾಲವಾಗಿ ಕಾರ್ಯನಿರ್ವಹಿಸುತ್ತಿದ್ದ ಆರೋಪದಲ್ಲಿ ಇರಾನ್, ಬೆಲ್ಜಿಯಮ್ ಮತ್ತು ಚೀನಾದ ಕಂಪೆನಿಗಳ ಗುಂಪೊಂದನ್ನು ಅಮೆರಿಕದ ಖಜಾನೆ ಇಲಾಖೆಯು ಗುರುವಾರ ಆರ್ಥಿಕ ದಿಗ್ಬಂಧನಗಳ ಕಪ್ಪು ಪಟ್ಟಿಗೆ ಸೇರಿಸಿದೆ.

ಈ ಕಂಪೆನಿಗಳು ಇರಾನ್‌ನ ಸೆಂಟ್ರಿಫ್ಯೂಜ್ ಟೆಕ್ನಾಲಜಿ ಕಂಪೆನಿಗೆ ಪೂರೈಕೆ ಜಾಲವಾಗಿ ಕಾರ್ಯನಿರ್ವಹಿಸುತ್ತಿದ್ದವು ಎಂದು ಖಜಾನೆ ಇಲಾಖೆ ಹೇಳಿದೆ. ಸೆಂಟ್ರಿಫ್ಯೂಜ್ ಟೆಕ್ನಾಲಜಿ ಕಂಪೆನಿಯು ಇರಾನ್ ಪರಮಾಣು ಇಂಧನ ಸಂಸ್ಥೆಗೆ ಎನ್‌ರಿಚ್‌ಮೆಂಟ್ ಸೆಂಟ್ರಿಫ್ಯೂಜ್‌ಗಳನ್ನು ತಯಾರಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News