ಚೀನಾದಲ್ಲಿ ನಮ್ಮ ಕಾಲದ ಗಂಭೀರ ಮಾನವಹಕ್ಕು ದುರಂತ: ಮೈಕ್ ಪಾಂಪಿಯೊ

Update: 2019-07-19 17:35 GMT

ವಾಶಿಂಗ್ಟನ್, ಜು. 19: ನಮ್ಮ ಕಾಲದ ಅತ್ಯಂತ ಗಂಭೀರ ಮಾನವಹಕ್ಕು ದುರಂತ ಚೀನಾದಲ್ಲಿ ನಡೆಯುತ್ತಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಹೇಳಿದ್ದಾರೆ.

 2017 ಎಪ್ರಿಲ್‌ನಿಂದ ಚೀನಾವು 10 ಲಕ್ಷಕ್ಕೂ ಅಧಿಕ ಮುಸ್ಲಿಮ್ ಮತ್ತು ಇತರ ಅಲ್ಪಸಂಖ್ಯಾತರನ್ನು ಕ್ಸಿನ್‌ಜಿಯಾಂಗ್‌ನಲ್ಲಿರುವ ಶಿಬಿರಗಳಲ್ಲಿ ಬಂಧಿಸಿಟ್ಟಿದೆ ಎಂದು ಗುರುವಾರ ನಡೆದ ಧಾರ್ಮಿಕ ಸ್ವಾತಂತ್ರ್ಯ ಕುರಿತ ಸಭೆಯೊಂದರಲ್ಲಿ ಮಾತನಾಡಿದ ಮೈಕ್ ಪಾಂಪಿಯೊ ಹೇಳಿದರು.

‘‘ನಮ್ಮ ಕಾಲದ ಅತ್ಯಂತ ಗಂಭೀರ ಮಾನವಹಕ್ಕು ದುರಂತವೊಂದು ಚೀನಾದಲ್ಲಿ ನಡೆಯುತ್ತಿದೆ. ಇದು ನಿಜವಾಗಿಯೂ ಶತಮಾನದ ಕಲೆಯಾಗಿದೆ’’ ಎಂದು ಅವರು ನುಡಿದರು.

‘‘ಚೀನಾದಲ್ಲಿ, ಚೀನಾ ಕಮ್ಯುನಿಸ್ಟ್ ಪಕ್ಷವು ಚೀನಾ ಜನತೆ ಮತ್ತು ಅವರ ಆತ್ಮಗಳ ಮೇಲೆ ನಿಯಂತ್ರಣ ಬಯಸುತ್ತಿದೆ’’ ಎಂದರು.

‘‘ಇದು ಚೀನಾ ಸಂವಿಧಾನದಲ್ಲಿ ಕಂಡುಬರುವ ‘ಧಾರ್ಮಿಕ ನಂಬಿಕೆಯ ಸ್ವಾತಂತ್ರ’ಕ್ಕೆ ಅನುಗುಣವಾಗಿದೆಯೇ?’’ ಎಂದು ಅವರು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News