ಕ್ಲೀನ್ ಸ್ವೀಪ್ ಸಾಧಿಸಿದ ಭಾರತ: ಸಿಂಗಲ್ಸ್ ನಲ್ಲಿ ಹರ್ಮೀತ್, ಐಹಿಕಗೆ ಜಯ

Update: 2019-07-22 17:48 GMT

ಕಟಕ್, ಜು.22: ಇಲ್ಲಿನ ಜವಾಹರಲಾಲ್ ನೆಹರೂ ಒಳಾಂಗಣ ಸ್ಟೇಡಿಯಂನಲ್ಲಿ ಸೋಮವಾರ ಕೊನೆಗೊಂಡಿರುವ 21ನೇ ಆವೃತ್ತಿಯ ಕಾಮನ್‌ವೆಲ್ತ್ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಎಲ್ಲ 7 ಚಿನ್ನದ ಪದಕಗಳನ್ನು ಬಾಚಿಕೊಂಡಿದೆ.

ಜಿ.ಸತ್ಯನ್ ವೈಯಕ್ತಿಕ ವಿಭಾಗದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. 26ರ ಹರೆಯದ ಹರ್ಮೀತ್ ದೇಸಾಯಿ ಸಿಂಗಲ್ಸ್ ಫೈನಲ್‌ನಲ್ಲಿ ಜಯ ಸಾಧಿಸಿ ಚಿನ್ನದ ಪದಕ ಜಯಿಸಿದರು.

ಭಾರತ ಚಾಂಪಿಯನ್‌ಶಿಪ್‌ನಲ್ಲಿ ಏಳು ಚಿನ್ನದ ಪದಕಗಳ ಜೊತೆಗೆ 5 ಬೆಳ್ಳಿ ಹಾಗೂ 3 ಕಂಚಿನ ಪದಕಗಳನ್ನು ಜಯಿಸಿ ಪದಕ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದೆ. ಸತ್ಯನ್ ಹಾಗೂ ಶರತ್ ಕಮಲ್ ಜೋಡಿ ಅಂಥೋನಿ ಅಮಲ್‌ರಾಜ್ ಹಾಗೂ ಮಾನವ್ ಠಕ್ಕರ್‌ಗೆ 1-3 ಅಂತರದಿಂದ ಶರಣಾಯಿತು. ಅಮಲ್‌ರಾಜ್-ಮಾನವ್ ಠಕ್ಕರ್ ಚಿನ್ನದ ಪದಕ ಜಯಿಸಿದರು.

ತನಗೆ ಲಭಿಸಿದ ಅವಕಾಶವನ್ನು ಬಳಸಿಕೊಂಡ ಐಹಿಕಾ ಮುಖರ್ಜಿ ಮಹಿಳೆಯರ ಸಿಂಗಲ್ಸ್‌ನಲ್ಲಿ ಮಧುರಿಕಾ ಪಾಟ್ಕರ್‌ರನ್ನು 4-0 ಅಂತರದಿಂದ ಮಣಿಸುವುದರೊಂದಿಗೆ ಮೊದಲ ಬಾರಿ ಚಿನ್ನದ ಪದಕ ಜಯಿಸಿದರು.

ತನಗೆ ಲಭಿಸಿದ ಅವಕಾಶವನ್ನು ಬಳಸಿಕೊಂಡ ಐಹಿಕಾ ಮುಖರ್ಜಿ ಮಹಿಳೆಯರ ಸಿಂಗಲ್ಸ್‌ನಲ್ಲಿ ಮಧುರಿಕಾ ಪಾಟ್ಕರ್‌ರನ್ನು 4-0 ಅಂತರದಿಂದ ಮಣಿಸುವುದರೊಂದಿಗೆ ಮೊದಲ ಬಾರಿ ಚಿನ್ನದ ಪದಕ ಜಯಿಸಿದರು.

ಮಹಿಳೆಯರ ಡಬಲ್ಸ್‌ನಲ್ಲಿ ಪೂಜಾ ಸಹಸ್ರಬುಧೆ ಹಾಗೂ ಕೃತ್ವಿಕಾ ಸಿನ್ಹಾ ರಾಯ್ ಭಾರತದ ಜೋಡಿ ಶ್ರೀಜಾ ಅಕುಲಾ ಹಾಗೂ ವೌಸುಮಿ ಪಾಲ್‌ರನ್ನು 3-1 ಅಂತರದಿಂದ ಮಣಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News