ಕಾಶ್ಮೀರ ವಿವಾದವನ್ನು ದ್ವಿಪಕ್ಷೀಯವಾಗಿ ಪರಿಹರಿಸಲು ಎಂದಿಗೂ ಸಾಧ್ಯವಿಲ್ಲ: ಇಮ್ರಾನ್

Update: 2019-07-23 16:21 GMT

ವಾಶಿಂಗ್ಟನ್, ಜು. 23: ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಕಾಶ್ಮೀರ ವಿವಾದವನ್ನು ದ್ವಿಪಕ್ಷೀಯವಾಗಿ ಎಂದಿಗೂ ಬಗೆಹರಿಸಲು ಸಾಧ್ಯವಾಗದು ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮಂಗಳವಾರ ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಶ್ವೇತಭವನದಲ್ಲಿ ಮಾತುಕತೆ ನಡೆಸಿದ ಗಂಟೆಗಳ ಬಳಿಕ ಇಮ್ರಾನ್ ಖಾನ್ ಈ ಹೇಳಿಕೆ ನೀಡಿದ್ದಾರೆ. ಈ ಮಾತುಕತೆಯ ವೇಳೆ, ಕಾಶ್ಮೀರ ವಿಷಯದಲ್ಲಿ 'ಮಧ್ಯಸ್ಥಿಕೆ' ವಹಿಸುವ ಕೊಡುಗೆಯನ್ನು ಟ್ರಂಪ್ ನೀಡಿದ್ದಾರೆ.

ಮಧ್ಯಸ್ಥಿಕೆ ವಹಿಸುವ ಟ್ರಂಪ್‌ರ ಕೊಡುಗೆಯನ್ನು ಇಮ್ರಾನ್ ಖಾನ್ ಸ್ವಾಗತಿಸಿದ್ದಾರೆ. ಇಮ್ರಾನ್ ಖಾನ್ ಮೂರು ದಿನಗಳ ಅಮೆರಿಕ ಪ್ರವಾಸದಲ್ಲಿದ್ದಾರೆ.

 ''ಕಾಶ್ಮೀರ ವಿವಾದಕ್ಕೆ ದ್ವಿಪಕ್ಷೀಯ ಮಾತುಕತೆಯಿಂದ ಪರಿಹಾರ ಸಿಗುವುದಿಲ್ಲ'' ಎಂದು ಇಮ್ರಾನ್ ಖಾನ್ 'ಫಾಕ್ಸ್ ನ್ಯೂಸ್'ಗೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News