ಸಂಸದೆಗೆ ಗುಂಡು ಹಾರಿಸಬೇಕೆಂದು ಹೇಳಿದ ಪೊಲೀಸರ ವಜಾ

Update: 2019-07-23 16:34 GMT

ವಾಶಿಂಗ್ಟನ್, ಜು. 23: ಡೆಮಾಕ್ರಟಿಕ್ ಪಕ್ಷದ ಸಂಸದೆ ಅಲೆಕ್ಸಾಂಡ್ರಿಯಾ ಒಕಾಸಿಯೊ-ಕಾರ್ಟೆಝ್‌ಗೆ ಗುಂಡು ಹಾರಿಸಬೇಕು ಎಂಬ ಅರ್ಥದ ಸಂದೇಶವೊಂದನ್ನು ಫೇಸ್‌ಬುಕ್‌ನಲ್ಲಿ ಹಾಕಿದ ಲೂಸಿಯಾನದ ಇಬ್ಬರು ಪೊಲೀಸರನ್ನು ಸೋಮವಾರ ವಜಾಗೊಳಿಸಲಾಗಿದೆ.

ಅಲೆಕ್ಸಾಂಡ್ರಿಯಾ ಮತ್ತು ಇತರ ಮೂವರು ಡೆಮಾಕ್ರಟಿಕ್ ಪಕ್ಷದ ಪ್ರಗತಿಪರ ಸಂಸದೆಯರ ವಿರುದ್ಧ ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ವಾಗ್ದಾಳಿ ನಡೆಸಿದ ಬಳಿಕ ಈ ಬೆಳವಣಿಗೆ ಸಂಭವಿಸಿದೆ.

''ಈ ಕೆಟ್ಟ ವ್ಯಕ್ತಿಗೆ ಒಂದು ಸುತ್ತಿನ ಅಗತ್ಯವಿದೆ. ಆದರೆ, ಅವರು ಈ ಹಿಂದೆ ಏನನ್ನು ಪೂರೈಸುತ್ತಿದ್ದರೋ ಅದನ್ನು ನಾನು ಹೇಳುತ್ತಿಲ್ಲ'' ಎಂಬುದಾಗಿ ಗ್ರೆಟ್ನ ಪೊಲೀಸ್ ಇಲಾಖೆಯ ಚಾರ್ಲೀ ರಿಸ್ಪೊಲಿ ಮಾಜಿ ಬಾರ್ ಪರಿಚಾರಕಿ ಒಕಾಸಿಯೊ ಕಾರ್ಟೆಝ್ ಬಗ್ಗೆ ಬರೆದಿದ್ದಾರೆ.

ರಿಸ್ಪೊಲಿ ಮತ್ತು ಅವರ ಸಂದೇಶವನ್ನು ಲೈಕ್ ಮಾಡಿದ ಅಧಿಕಾರಿ ಆ್ಯಂಜೆಲೊ ವಾರಿಸ್ಕೊರನ್ನು ವಜಾಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News