ಐಟಿಆರ್ ಸಲ್ಲಿಕೆಗೆ ಗಡುವು ಆ.31ರವರೆಗೆ ವಿಸ್ತರಣೆ

Update: 2019-07-23 16:41 GMT

ಹೊಸದಿಲ್ಲಿ,ಜು.23: ಕೇಂದ್ರಿಯ ನೇರ ತೆರಿಗೆಗಳ ಮಂಡಳಿ(ಸಿಬಿಡಿಟಿ)ಯು ಮಂಗಳವಾರ 2019-20ರ ತೆರಿಗೆ ವರ್ಷಕ್ಕಾಗಿ ವ್ಯಕ್ತಿಗತ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ ಅಂತಿಮ ಗಡುವನ್ನು 2019,ಜು.31ರಿಂದ 2019,ಆ.31ಕ್ಕೆ ವಿಸ್ತರಿಸಿದೆ.

2018-19ನೇ ಸಾಲಿಗೆ ಮೂಲದಲ್ಲಿ ತೆರಿಗೆ ಕಡಿತ(ಟಿಡಿಎಸ್) ವಿವರಗಳನ್ನು ಸಲ್ಲಿಸಬೇಕಾದ ಫಾರ್ಮ್ 16ರ ವಿತರಣೆಯಲ್ಲಿ ವಿಳಂಬವಾಗಿತ್ತು. ಆದಾಯ ತೆರಿಗೆ ಇಲಾಖೆಯು ಕಳೆದ ತಿಂಗಳು ಉದ್ಯೋಗದಾತರು ತಮ್ಮ ಉದ್ಯೋಗಿಗಳಿಗೆ ಫಾರ್ಮ್ 16 ಟಿಡಿಎಸ್ ಸರ್ಟಿಫಿಕೇಟ್‌ಗಳನ್ನು ವಿತರಿಸಲು ಅಂತಿಮ ಗಡುವನ್ನು ಜು.10ರವರೆಗೆ 25 ದಿನಗಳ ಕಾಲ ವಿಸ್ತರಿಸಿತ್ತು. ಇದರಿಂದಾಗಿ ವೇತನದಾರ ತೆರಿಗೆದಾರರಿಗೆ ತಮ್ಮ ಆದಾಯ ತೆರಿಗೆ ರಿಟರ್ನ್‌ಗಳನ್ನು ಸಲ್ಲಿಸಲು ಕೇವಲ 20 ದಿನಗಳ ಕಾಲಾವಕಾಶ ದೊರಕಿದ್ದು,

ಇದರಿಂದ ಅವರು ತೊಂದರೆ ಎದುರಿಸುವಂತಾಗಿತ್ತು. ಈ ಹಿನ್ನೆಲೆಯಲ್ಲಿ ಐಟಿಆರ್ ಸಲ್ಲಿಕೆಗೆ ಅಂತಿಮ ಗಡುವನ್ನು ವಿಸ್ತರಿಸಬೇಕೆಂಬ ಆಗ್ರಹವಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News