ಅಗ್ರ-10ರಲ್ಲಿ ಸಿಂಧು, ಸೈನಾ

Update: 2019-07-31 18:15 GMT

ಹೊಸದಿಲ್ಲಿ, ಜು.31: ಭಾರತದ ಸ್ಟಾರ್ ಶಟ್ಲರ್‌ಗಳಾದ ಪಿ.ವಿ.ಸಿಂಧು ಹಾಗೂ ಸೈನಾ ನೆಹ್ವಾಲ್ ವಿಶ್ವ ಬ್ಯಾಡ್ಮಿಂಟನ್ ಫೆಡರೇಶನ್(ಬಿಡಬ್ಲುಎಫ್)ಮಹಿಳೆಯರ ಸಿಂಗಲ್ಸ್  ರ‍್ಯಾಂಕಿಂಗ್ ನಲ್ಲಿ ಕ್ರಮವಾಗಿ ಐದನೇ ಹಾಗೂ 8ನೇ ಸ್ಥಾನ ಕಾಯ್ದುಕೊಂಡಿದ್ದಾರೆ.

ಮುಗ್ಧಾ ಅಗ್ರೆ ಹಾಗೂ ರಿತುಪರ್ಣ ದಾಸ್ ಆರು ಹಾಗೂ ಒಂದು ಸ್ಥಾನ ಮೇಲಕ್ಕೇರಿ ಕ್ರಮವಾಗಿ 62ನೇ ಹಾಗೂ 65ನೇ ಸ್ಥಾನದಲ್ಲಿದ್ದಾರೆ.

ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ ಆಟಗಾರರ ಪೈಕಿ ಕಿಡಂಬಿ ಶ್ರೀಕಾಂತ್ ಹಾಗೂ ಸಮೀರ್ ವರ್ಮಾ 10ನೇ ಹಾಗೂ 13ನೇ ರ್ಯಾಂಕನ್ನು ಕಾಯ್ದುಕೊಂಡಿದ್ದಾರೆ. ಕಳೆದ ವಾರ ಜಪಾನ್ ಓಪನ್ ಸೆಮಿ ಫೈನಲ್‌ನಲ್ಲಿ ವಿಶ್ವದ ನಂ.1 ಕೆಂಟೊ ಮೊಮೊಟಾಗೆ ಸೋತಿದ್ದ ಸಾಯಿ ಪ್ರಣೀತ್ ನಾಲ್ಕು ಸ್ಥಾನ ಭಡ್ತಿ ಪಡೆದು 20ನೇ ಸ್ಥಾನ ತಲುಪಿದ್ದಾರೆ.

ಎಚ್.ಎಸ್.ಪ್ರಣಯ್(31ನೇ  ರ‍್ಯಾಂಕ್), ಪಿ.ಕಶ್ಯಪ್(35ನೇ), ಶುಭಾಂಕರ ಡೇ(41ನೇ), ಸೌರಭ್ ವರ್ಮಾ(44ನೇ ರ‍್ಯಾಂಕ್)ಪುರುಷರ ಸಿಂಗಲ್ಸ್ ಪಟ್ಟಿಯಲ್ಲಿ ಭಡ್ತಿ ಪಡೆದಿದ್ದಾರೆ.

ಪುರುಷರ ಸಿಂಗಲ್ಸ್ ರ್ಯಾಂಕಿಂಗ್‌ನಲ್ಲಿ ಅಜಯ್ ಜಯರಾಮ್(67ನೇ ನಿ.) ಹಾಗೂ ಲಕ್ಷ ಸೇನ್(69ನೇ ನಿ.), ಪುರುಷರ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ 2 ಸ್ಥಾನ ಭಡ್ತಿ ಪಡೆದು 16ನೇ ಸ್ಥಾನಕ್ಕೇರಿದ್ದಾರೆ. ಮನು ಅತ್ರಿ ಹಾಗೂ ಬಿ.ಸುಮೀತ್ ರೆಡ್ಡಿ 25ನೇ ಸ್ಥಾನ ಉಳಿಸಿಕೊಂಡಿದ್ದಾರೆ.

ಭಾರತದ ಮತ್ತೊಂದು ಜೋಡಿ ಅರ್ಜುನ್ ಹಾಗೂ ರಾಮಚಂದ್ರನ್ ಶ್ಲೋಕ್ 7 ಸ್ಥಾನ ಮೇಲಕ್ಕೇರಿ 48ನೇ ಸ್ಥಾನ ತಲುಪಿದ್ದಾರೆ. ಮಹಿಳೆಯರ ಡಬಲ್ಸ್ ಜೋಡಿ ಅಶ್ವಿನಿ ಪೊನ್ನಪ್ಪ ಹಾಗೂ ಎನ್.ಸಿಕ್ಕಿ ರೆಡ್ಡಿ 2 ಸ್ಥಾನ ಕಳೆದುಕೊಂಡು 24ನೇ ಸ್ಥಾನ ತಲುಪಿದ್ದಾರೆ. ಮಿಶ್ರ ಡಬಲ್ಸ್‌ನಲ್ಲಿ ಪ್ರಣವ್ ಜೆ.ಚೋಪ್ರಾ ಹಾಗೂ ಸಿಕ್ಕಿ ರೆಡ್ಡಿ 2 ಸ್ಥಾನ ಕಳೆದುಕೊಂಡು 22ನೇ ಸ್ಥಾನದಲ್ಲೂ, ಅಶ್ವಿನಿ ಹಾಗೂ ರಾಂಕಿರೆಡ್ಡಿ 2 ಸ್ಥಾನ ಜಿಗಿದು 23ನೇ ಸ್ಥಾನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News