×
Ad

ರಶ್ಯ ಬಾಕ್ಸಿಂಗ್ ಟೂರ್ನಮೆಂಟ್

Update: 2019-07-31 23:54 IST

ಮಾಸ್ಕೊ, ಜು.31: ರಶ್ಯ ಇಂಟರ್‌ನ್ಯಾಶನಲ್ ಬಾಕ್ಸಿಂಗ್ ಟೂರ್ನಮೆಂಟ್‌ನಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಗೌರವ್ ಸೋಳಂಕಿ(56ಕೆಜಿ) ಹಾಗೂ ಪಿಂಕಿ ಜಾಂಗ್ರಾ(51ಕೆಜಿ)ಸುಲಭ ಗೆಲುವು ದಾಖಲಿಸಿ ಕ್ವಾರ್ಟರ್ ಫೈನಲ್‌ಗೆ ತಲುಪಿದರು. ಕಳೆದ ವರ್ಷ ಗೋಲ್ಡ್‌ಕೋಸ್ಟ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ಸೋಳಂಕಿ ರಶ್ಯದ ಮುರಾದ್ ರಬಾದನೊವ್‌ರನ್ನು 5-0 ಅಂತರದಿಂದ ಮಣಿಸಿದರು.

2014ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚಿನ ಪದಕ ವಿಜೇತ ಜಾಂಗ್ರಾ ಬೆಲಾರಸ್‌ನ ಬರಿಮ್ ಯಾನಾರನ್ನು 5-0 ಅಂತರದಿಂದ ಸೋಲಿಸಿದ್ದಾರೆ.

ನೀರಜ್(57ಕೆಜಿ)ಮಂಗೋಲಿಯದ ಗೆರೆಲ್‌ಸಿಮೆಗ್‌ರನ್ನು ಒಮ್ಮತದ ತೀರ್ಪಿನಲ್ಲಿ ಸೋಲಿಸಿದ್ದಾರೆ.

ಟೂರ್ನಮೆಂಟ್‌ನಲ್ಲಿ ಅಝೆರ್‌ಬೈಜಾನ್, ಬೆಲಾರಸ್, ಚೀನಾ, ಇಸ್ರೇಲ್, ಇಟಲಿ, ಮಂಗೋಲಿಯ, ಸ್ವೀಡನ್, ಉಕ್ರೇನ್ ಹಾಗೂ ಉಜ್ಬೇಕಿಸ್ತಾನ ಸಹಿತ 20 ದೇಶಗಳ ಸುಮಾರು 250 ಬಾಕ್ಸರ್‌ಗಳು ಭಾಗವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News