ಆ್ಯಂಡರ್ಸನ್‌ಗೆ ಮತ್ತೆ ಕಾಡಿದ ಗಾಯದ ಸಮಸ್ಯೆ

Update: 2019-08-01 18:11 GMT

ಬರ್ಮಿಂಗ್‌ಹ್ಯಾಮ್, ಆ.1: ಆಸ್ಟ್ರೇಲಿಯ ವಿರುದ್ಧ ಗುರುವಾರ ಇಲ್ಲಿ ಆರಂಭವಾದ ಆ್ಯಶಸ್ ಸರಣಿಯ ಮೊದಲ ದಿನ ಇಂಗ್ಲೆಂಡ್‌ನ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್‌ಗೆ ಗಾಯದ ಸಮಸ್ಯೆ ಕಾಣಿಸಿಕೊಂಡ ಕಾರಣ ಸ್ಕ್ಯಾನಿಂಗ್‌ಗೆ ಒಳಗಾದರು.

 37ರ ಹರೆಯದ ಆ್ಯಂಡರ್ಸನ್ ಜುಲೈನಲ್ಲಿ ಲಂಕಾಶೈರ್ ಪರ ಆಡುವಾಗ ಮೀನಖಂಡ ಸೆಳೆತ ಕಾಣಿಸಿಕೊಂಡಿತ್ತು. ಆ್ಯಶಸ್ ಸರಣಿಗಿಂತ ಮೊದಲು ಫಿಟ್ ಆಗಲು ಪರದಾಟ ನಡೆಸುತ್ತಿದ್ದರು. ಬುಧವಾರ ಬೆಳಗ್ಗೆ ಮೊದಲ ಟೆಸ್ಟ್ ಪಂದ್ಯದಲ್ಲಿ ಆಡಲು ಫಿಟ್ ಆಗಿದ್ದರು.

ಗುರುವಾರ ಬೌಲಿಂಗ್ ದಾಳಿ ಆರಂಭಿಸಿದ ಆ್ಯಂಡರ್ಸನ್ ತನ್ನ ಶಿಸ್ತುಬದ್ಧ ಬೌಲಿಂಗ್‌ನ ಮೂಲಕ ಆಸ್ಟ್ರೇಲಿಯದ ಬ್ಯಾಟ್ಸ್‌ಮನ್‌ಗೆ ಆರಂಭದಲ್ಲಿ ಸವಾಲಾದರು. ಆದರೆ ಅವರಿಗೆ ವಿಕೆಟ್ ಪಡೆಯಲು ಸಾಧ್ಯವಾಗಿರಲಿಲ್ಲ. ಆ್ಯಂಡರ್ಸನ್ 4 ಓವರ್‌ಗಳಲ್ಲಿ ಕೇವಲ 1 ರನ್ ನೀಡಿ ಬಿಗಿ ಬೌಲಿಂಗ್ ಮಾಡಿದ್ದರು. ಭೋಜನ ವಿರಾಮದ ಬಳಿಕ ಆ್ಯಂಡರ್ಸನ್ ಮತ್ತೆ ಬೌಲಿಂಗ್ ಮಾಡದೇ ಸ್ಕಾನಿಂಗ್‌ಗೆ ಒಳಗಾದರು. ಆ್ಯಂಡರ್ಸನ್ ಬದಲಿಗೆ ಕ್ರಿಸ್ ವೋಕ್ಸ್ ಬೌಲಿಂಗ್ ದಾಳಿ ಮುಂದುವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News