ಮೊದಲ ಟ್ವೆಂಟಿ-20: ಭಾರತಕ್ಕೆ 4 ವಿಕೆಟ್ ಜಯ

Update: 2019-08-03 18:32 GMT

 ಫ್ಲೋರಿಡಾ, ಆ.3: ಚೊಚ್ಚಲ ಪಂದ್ಯ ಆಡಿದ ನವದೀಪ್ ಸೈನಿ(3-17) ಹಾಗೂ ಹಿರಿಯ ಬೌಲರ್ ಭುವನೇಶ್ವರ ಕುಮಾರ(2-19) ಅವರ ಶಿಸ್ತುಬದ್ಧ ಬೌಲಿಂಗ್ ದಾಳಿ ನೆರವಿನಿಂದ ಇಲ್ಲಿ ಶನಿವಾರ ನಡೆದ ಮೊದಲ ಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ವೆಸ್ಟ್‌ಇಂಡೀಸ್ ತಂಡವನ್ನು ಭಾರತ 4 ವಿಕೆಟ್‌ಗಳ ಅಂತರದಿಂದ ಮಣಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ್ದ ವಿಂಡೀಸನ್ನು ಭಾರತ 9 ವಿಕೆಟ್ ನಷ್ಟಕ್ಕೆ 95 ರನ್‌ಗಳಿಗೆ ನಿಯಂತ್ರಿಸಿತು. ಗೆಲ್ಲಲು ಸುಲಭ ಗುರಿ ಪಡೆದ ಭಾರತ ಬ್ಯಾಟಿಂಗ್ ವೈಫಲ್ಯದ ಹೊರತಾಗಿಯೂ 17.2 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 96 ರನ್ ಗಳಿಸಿತು. ಭಾರತದ ಪರ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ(24) ಅತ್ಯಧಿಕ ಸ್ಕೋರ್ ಗಳಿಸಿದರು. ನಾಯಕ ವಿರಾಟ್ ಕೊಹ್ಲಿ 19 ರನ್ ಗಳಿಸಿದರು.
ವಿಂಡೀಸ್ ಪರ ಸುನೀಲ್ ನರೇನ್(2-14), ಕೊಟ್ರೆಲ್ (2-20)ಹಾಗೂ ಪಾಲ್ (2-23) ತಲಾ ಎರಡು ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News