2ನೇ ಟ್ವೆಂಟಿ-20: ಭಾರತ 167/5

Update: 2019-08-04 16:27 GMT

ಫ್ಲೋರಿಡಾ, ಆ.4: ವೆಸ್ಟ್‌ಇಂಡೀಸ್ ವಿರುದ್ಧದ ಎರಡನೇ ಟ್ವೆಂಟಿ-20 ಪಂದ್ಯದಲ್ಲಿ ಭಾರತ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶಮಾ ಅರ್ಧಶತಕ(67) ನೆರವಿನಲ್ಲಿ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 167 ರನ್ ಗಳಿಸಿದೆ.

ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಭಾರತದ ಬ್ಯಾಟಿಂಗ್ ಆರಂಭದಲ್ಲಿ ಚೆನ್ನಾಗಿತ್ತು. ಮೊದಲ ವಿಕೆಟ್‌ಗೆ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ 7.5 ಓವರ್‌ಗಳಲ್ಲಿ 67 ರನ್ ಗಳ ಜೊತೆಯಾಟ ನೀಡಿದರು.

ಶಿಖರ್ ಧವನ್ 23 ರನ್ ಗಳಿಸಿ ಕೀಮೊ ಪಾಲ್ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ರೋಹಿತ್ ಶರ್ಮಾ ಅವರು ಒಶಾನೆ ಥಾಮಸ್ ಎಸೆತದಲ್ಲಿ ಹೆಟ್ಮೆಯರ್‌ಗೆ ಕ್ಯಾಚ್ ನೀಡಿದರು. ಔಟಾಗುವ ಮುನ್ನ ರೋಹಿತ್ 51 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಲ್ಲಿ 67 ರನ್ ಗಳಿಸಿದರು.

 ರೋಹಿತ್ 107ನೇ ಸಿಕ್ಸರ್ ದಾಖಲಿಸುವ ಮೂಲಕ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ವೆಸ್ಟ್‌ಇಂಡೀಸ್‌ನ ಕ್ರಿಸ್ ಗೇಲ್ (105 ಸಿಕ್ಸರ್) ದಾಖಲೆ ಮುರಿದಿದ್ದಾರೆ.

ನಾಯಕ ವಿರಾಟ್ ಕೊಹ್ಲಿ 28 ರನ್ ಗಳಿಸಿ ಕಾಟ್ರೆಲ್ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಬಳಿಕ ರಿಷಭ್ ಪಂತ್ 4 ರನ್, ಮನೀಷ್ ಪಾಂಡೆ 6ರನ್, ಕೃನಾಲ್ ಪಾಂಡ್ಯ ಔಟಾಗದೆ 20ರನ್ ಮತ್ತು ರವೀಂದ್ರ ಜಡೇಜ ಔಟಾಗದೆ 9 ರನ್ ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News