ದುಲೀಪ್ ಟ್ರೋಫಿಗೆ ತಂಡಗಳ ಪ್ರಕಟ
ಚೆನ್ನೈ, ಆ.6: ಮುಂಬರುವ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಮೆಂಟ್‌ಗೆ ವಿವಿಧ ತಂಡಗಳು ಪ್ರಕಟಗೊಂಡಿದ್ದು, ಹಾಲಿ ಚಾಂಪಿಯನ್ ಇಂಡಿಯಾ ಬ್ಲೂ ತಂಡವನ್ನು ಪಂಜಾಬ್‌ನ ಆಟಗಾರ ಶುಭ್‌ಮನ್ ಗಿಲ್ ನಾಯಕರಾಗಿ ಮುನ್ನಡೆಸಲಿರುವರು.
ಆ.17ರಿಂದ ಸೆ.8ರ ತನಕ ನಡೆಯಲಿರುವ ದುಲೀಪ್ ಟೂರ್ನಮೆಂಟ್‌ಗೆ ಬಿಸಿಸಿಐ ರಾಷ್ಟ್ರೀಯ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ ಪ್ರಸಾದ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮೂರು ತಂಡಗಳಿಗೆ ಆಟಗಾರರ ಆಯ್ಕೆ ನಡೆಯಿತು.
ಫೈಝ್ ಫಝಲ್ ಮತ್ತು ಪ್ರಿಯಾಂಕ್ ಪಾಂಚಾಲ್ ಕ್ರಮವಾಗಿ ಇಂಡಿಯಾ ಗ್ರೀನ್ ಮತ್ತು ಇಂಡಿಯಾ ರೆಡ್ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ.
ಕಳೆದ ಆವೃತ್ತಿಯ ಫೈನಲ್‌ನಲ್ಲಿ ಇಂಡಿಯಾ ರೆಡ್ ತಂಡವನ್ನು ಇನಿಂಗ್ಸ್ ಹಾಗೂ 187 ರನ್‌ಗಳ ಅಂತರದಿಂದ ಮಣಿಸಿದ ಇಂಡಿಯಾ ಬ್ಲೂ ಚಾಂಪಿಯನ್ ಆಗಿ ಪ್ರಶಸ್ತಿಯನ್ನು ಬಾಚಿಕೊಂಡಿತ್ತು.
ದುಲೀಪ್ ಟ್ರೋಫಿ 2019-20ನೇ ಸಾಲಿನ ಮೊದಲ ದೇಶೀಯ ಟೂರ್ನಮೆಂಟ್ ಆಗಿದೆ. ಒಂದು ತಿಂಗಳ ಕಾಲ ನಡೆಯಲಿರುವ ವಿಜಯ್ ಹಝಾರೆ ಟ್ರೋಫಿ ಸೆ.24ರಂದು ಆರಂಭಗೊಳ್ಳಲಿದೆ.
ದೇವ್‌ಧರ್ ಟ್ರೋಫಿ ಅ.31ರಿಂದ ನ.4, ಸೈಯದ್ ಮುಷ್ತಾಕ್ ಅಲಿ ಟಿ-20 ಟೂರ್ನಮೆಂಟ್ ನ.8ರಿಂದ ಡಿ.1ರ ತನಕ ಮತ್ತು ರಣಜಿ ಟ್ರೋಫಿ ಡಿ.9ರಂದು ಆರಂಭಗೊಂಡು 2020, ಮಾ.13ರಂದು ಕೊನೆಗೊಳ್ಳಲಿದೆ.
ದುಲೀಪ್ ಟ್ರೋಫಿಗೆ ತಂಡ
<ಇಂಡಿಯಾ ಬ್ಲೂ: ಶುಭ್‌ಮನ್ ಗಿಲ್(ನಾಯಕ), ಋತುರಾಜ್ ಗಾಯಕ್‌ವಾಡ್, ರಜತ್ ಪಾಟಿದಾರ್, ರಿಕಿ ಭುಯಿ, ಅನ್ಮೊಲ್‌ಪ್ರೀತ್ ಸಿಂಗ್, ಅಂಕೀತ್ ಬಾವ್ನೆ, ಸ್ನೇಲ್ ಪಟೇಲ್(ವಿಕೆಟ್ ಕೀಪರ್), ಶ್ರೇಯಸ್ ಗೋಪಾಲ್, ಸೌರಭ್ ಕುಮಾರ್, ಜಲಜ್ ಸಕ್ಸೇನಾ, ತುಷಾರ್ ದೇಶಪಾಂಡೆ, ಬಾಸಿಲ್ ಥಾಂಪಿ, ಅಂಕಿತ್ ಚೌಧರಿ, ದ್ವಿವೇಶ್ ಪಾಥಾನಿಯಾ ಮತ್ತು ಅಶುತೋಷ್ ಆಮರ್.
<ಇಂಡಿಯಾ ಗ್ರೀನ್: ಫೈಝ್ ಫಝಲ್(ನಾಯಕ), ಅಕ್ಷತ್ ರೆಡ್ಡಿ, ದ್ರುವ್ ಶೋರೆ, ಸಿದ್ದೇಶ್ ಲಾಡ್, ಪ್ರಿಯಮ್ ಗಾರ್ಗ್, ಆಕಾಶ್‌ದೀಪ್ ನಾಥ್, ರಾಹುಲ್ ಚಹಾರ್, ಧರ್ಮೆಂದ್ರ ಸಿನ್ಹಾ ಜಡೇಜ, ಜಯಂತ್ ಯಾದವ್, ಅಂಕಿತ್ ರಜಪೂತ್, ಇಶಾನ್ ಪೊರೆಲ್, ತನ್ವೀರ್ ಉಲ್ ಹಕ್, ಅಕ್ಷಯ್ ವಾಡೇಕರ್(ವಿಕೆಟ್ ಕೀಪರ್), ಆಜೇಶ್ ಮೊಹಂತಿ ಮತ್ತು ಮಿಲಂದ್ ಕುಮಾರ್.
<ಇಂಡಿಯಾ ರೆಡ್: ಪ್ರಿಯಾಂಕ್ ಪಾಂಚಾಲ್(ನಾಯಕ), ಅಭಿಮನ್ಯು ಈಶ್ವರನ್, ಅಕ್ಷರ್ ಪಟೇಲ್, ಕರುಣ್ ನಾಯರ್, ಇಶಾನ್ ಕಿಶನ್(ವಿಕೆಟ್ ಕೀಪರ್), ಹರ್‌ಪ್ರೀತ್ ಸಿಂಗ್ ಭಾಟಿಯಾ, ಮಹಿಪಾಲ್ ಲೊಮ್ರಿರ್, ಆದಿತ್ಯ ಸಾರ್ವಟೆ, ಅಕ್ಷಯ್ ವಾಖರೆ, ವರುಣ್ ಆ್ಯರೊನ್, ರೋನಿತ್ ಮೋರೆ, ಜಯದೇವ್ ಉನಾದ್ಕಟ್, ಸಂದೀಪ್ ವಾರಿಯರ್ ಮತ್ತು ಅಂಕಿತ್ ವಾಲ್ಸಿ.