ಫೀಲ್ಡಿಂಗ್ ಆಯ್ದುಕೊಂಡ ಭಾರತ
Update: 2019-08-06 23:31 IST
ಪ್ರೊವಿಡೆನ್ಸ್, ಆ.6: ವೆಸ್ಟ್‌ಇಂಡೀಸ್ ವಿರುದ್ಧದ ಮೂರನೇ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಮಂಗಳವಾರ ಟಾಸ್ ಜಯಿಸಿದ ಭಾರತ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ.
ಒದ್ದೆ ಮೈದಾನದಿಂದಾಗಿ ನಾಣ್ಯ ಚಿಮ್ಮುವ ಪ್ರಕ್ರಿಯೆ ವಿಳಂಬವಾಯಿತು.
ಟಾಸ್ ಜಯಿಸಿದ ಭಾರತದ ನಾಯಕ ವಿರಾಟ್ ಕೊಹ್ಲಿ ತೇವಾಂಶದಿಂದ ಕೂಡಿರುವ ಪಿಚ್‌ನ ಲಾಭ ಪಡೆಯಲು ವಿಂಡೀಸ್‌ನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಲಾಗಿದ್ದು, ಕೆ.ಎಲ್. ರಾಹುಲ್ ಅವರು ಶಿಖರ್ ಧವನ್‌ರೊಂದಿಗೆ ಇನಿಂಗ್ಸ್ ಆರಂಭಿಸಲಿದ್ದಾರೆ.
ರವೀಂದ್ರ ಜಡೇಜ ಬದಲಿಗೆ ರಾಹುಲ್ ಚಹಾರ್,ಖಲೀಲ್ ಅಹ್ಮದ್ ಬದಲಿಗೆ ದೀಪಕ್ ಚಹಾರ್ ಆಡುವ ಅವಕಾಶ ಪಡೆದಿದ್ದಾರೆ.
ರಾಹುಲ್ ಹಾಗೂ ದೀಪಕ್ ಚೊಚ್ಚಲ ಪಂದ್ಯ ಆಡಲು ಸಜ್ಜಾಗಿದ್ದಾರೆ.