ಗಂಭೀರ್ ದಾಖಲೆ ಮುರಿದ ಗಿಲ್

Update: 2019-08-09 06:33 GMT

ಟಾರೌಬಾ (ಟ್ರಿನಿಡಾಡ್ ಮತ್ತು ಟೊಬಾಗೊ),ಆ.9: ವೆಸ್ಟ್ ಇಂಡೀಸ್  'ಎ ವಿರುದ್ಧ  ಇಲ್ಲಿ  ನಡೆಯುತ್ತಿರುವ 3ನೇ ಹಾಗೂ  ಅಂತಿಮ ಅನಧಿಕೃತ ಟೆಸ್ಟ್ ನಲ್ಲಿ ಭಾರತ 'ಎ ತಂಡದ ಬ್ಯಾಟ್ಸ್ ಮನ್ ಶುಭ್ ಮನ್ ಗಿಲ್ ದ್ವಿಶತಕ ದಾಖಲಿಸಿದ್ದಾರೆ.

19ರ ಹರೆಯದ ಗಿಲ್ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ದ್ವಿಶತಕ ದಾಖಲಿಸಿದ ಯುವ ಬ್ಯಾಟ್ಸ್ ಮನ್ ಎನಿಸಿಕೊಂಡಿದ್ದಾರೆ.  ಇದರೊಂದಿಗೆ ಭಾರತದ  ಮಾಜಿ ಆರಂಭಿಕ ಬ್ಯಾಟ್ಸ್ ಮನ್ ಗೌತಮ್ ಗಂಭೀರ್ ದಾಖಲೆಯನ್ನು ಗಿಲ್ ಮುರಿದಿದ್ದಾರೆ. 2002ರಲ್ಲಿ 20ರ ಹರೆಯದ ಗಂಭೀರ್ ಮಂಡಳಿ ಅಧ್ಯಕ್ಷರ ಇಲೆವೆನ್ ಪರ ಝಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ದ್ವಿಶತಕ (218) ದಾಖಲಿಸಿದ್ದರು. 

ವೆಸ್ಟ್ ಇಂಡೀಸ್  'ಎ ವಿರುದ್ಧ ಮೊದಲ  ಇನಿಂಗ್ಸ್ ನಲ್ಲಿ ಭಾರತ 201 ರನ್ ಗಳಿಸಿತ್ತು. ವೆಸ್ಟ್ ಇಂಡೀಸ್ 194ಕ್ಕೆ ಆಲೌಟಾಗಿತ್ತು.  ಗಿಲ್ ದ್ವಿಶತಕ   (ಔಟಾಗದೆ 204) ಮತ್ತು  ಹನುಮಾನ್ ವಿಹಾರಿ  ಶತಕ (ಔಟಾಗದೆ 118) ನೆರವಿನಲ್ಲಿ ಭಾರತ 'ಎ ಎರಡನೇ ಇನಿಂಗ್ಸ್ ನಲ್ಲಿ 90 ಓವರ್ ಗಳಲ್ಲಿ  4 ವಿಕೆಟ್ ನಷ್ಟದಲ್ಲಿ 365 ರನ್ ಗಳಿಸಿ ಡಿಕ್ಲೇರ್ ಮಾಡಿದೆ.

250 ಎಸೆತಗಳನ್ನು ಎದುರಿಸಿದ ಗಿಲ್ 19 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 204 ರನ್ ಗಳಿಸಿದರು.  ನಾಯಕ ವಿಹಾರಿ ಮತ್ತು ಗಿಲ್ 5ನೇ ವಿಕೆಟ್ ಗೆ ಮುರಿಯದ ಜೊತೆಯಾಟದಲ್ಲಿ 315 ರನ್ ಜಮೆ ಮಾಡಿದರು. ಇದರಿಂದಾಗಿ ಭಾರತ ಎ ಮೇಲುಗೈ ಸಾಧಿಸಿದ್ದು, ಗೆಲುವಿಗೆ 373 ರನ್ ಗಳ ಸವಾಲು ಪಡೆದಿರುವ ವೆಸ್ಟ್ ಇಂಡೀಸ್ ಎ' ತಂಡ  ಎರಡನೇ ಇನಿಂಗ್ಸ್ ನಲ್ಲಿ ವಿಕೆಟ್ ನಷ್ಟವಿಲ್ಲದೆ 37 ರನ್ ಗಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News