ಆಧುನಿಕ ಯುಗದ ಮಹಾನ್ ಕ್ರಿಕೆಟಿಗ: ನಿವೃತ್ತಿ ಘೋಷಿಸಿದ ಹಾಶಿಂ ಅಮ್ಲರಿಗೆ ಟ್ವಿಟರ್ ನಲ್ಲಿ ಪ್ರಶಂಸೆಯ ಮಹಾಪೂರ

Update: 2019-08-09 11:29 GMT

ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿರುವ ದಕ್ಷಿಣ ಆಫ್ರಿಕಾದ ಖ್ಯಾತ ಕ್ರಿಕೆಟಿಗ ಹಾಶಿಂ ಅಮ್ಲ ಆವರಿಗೆ ಹಲವು ಖ್ಯಾತ ಕ್ರಿಕೆಟಿಗರ ಸಹಿತ ನೂರಾರು ಟ್ವಿಟರಿಗರ ಪ್ರಶಂಸೆಯ ಮಹಾಪೂರವೇ ಹರಿದು ಬಂದಿದೆ.

ಮಾಜಿ ಕ್ರಿಕೆಟಿಗ ಮುಹಮ್ಮದ್ ಕೈಫ್ ಟ್ವೀಟ್ ಮಾಡಿ, "ಆಧುನಿಕ ಯುಗದ ಮಹಾನ್ ಕ್ರಿಕೆಟಿಗರಲ್ಲೊಬ್ಬರು. ಅತ್ಯುತ್ತಮ ಕ್ರಿಕೆಟ್ ಜೀವನದ ನಂತರ ನಿಮ್ಮ ನಿವೃತ್ತ ಜೀವನಕ್ಕೆ ಶುಭ ಹಾರೈಕೆಗಳು'' ಎಂದು ಬರೆದಿದ್ದಾರೆ.

ಕಿಂಗ್ಸ್ ಇಲೆವೆನ್ ಪಂಜಾಬ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ನಲ್ಲಿ ಹೀಗೆ ಬರೆದಿದೆ ``ನಮ್ಮ ಮಾಜಿ ಶೇರ್ ಹಾಗೂ ವಿಶ್ವ ದರ್ಜೆಯ ಆರಂಭಿಕ ಬ್ಯಾಟ್ಸ್ ಮೆನ್. ಅವರು ತಮ್ಮ ವೃತ್ತಿ ಜೀವನದ ಉತ್ತುಂಗದಲ್ಲಿ ಅಪ್ರತಿಮ ಸಾಧಕರಾಗಿದ್ದರು. ಒಬ್ಬ ವಿನೀತ ವ್ಯಕ್ತಿ''

ದಕ್ಷಿಣ ಆಫ್ರಿಕಾದ ಅವರ ಸಹ ಆಟಗಾರರಾಗಿದ್ದ ಎ ಬಿ ಡಿ ವಿಲಿಯರ್ಸ್ ಟ್ವೀಟ್ ಮಾಡಿ “ನಿಮ್ಮ  ಪ್ರತಿಭೆಯ ಬಗ್ಗೆ ಹಲವರಿಗೆ ಆರಂಭದಲ್ಲಿ ಸಂಶಯವಿತ್ತು. ಆದರೆ ನೀವು ಕೆಚ್ಚೆದೆಯ ಹೋರಾಟಗಾರರು. ನೀವು ಜಗತ್ತಿನ ಅತ್ಯುತ್ತಮ ಆಟಗಾರರಲ್ಲೊಬ್ಬರಾಗಿ ಹೊರಹೊಮ್ಮಿದ್ದೀರಿ'' ಎಂದು ಬರೆದಿದ್ದಾರೆ.

ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾನ್ ಟ್ವೀಟ್, “ಮೊದಲ ಬಾರಿ ನಾನು ಹಾಶಿಂ ಅಮ್ಲಾ ವಿರುದ್ಧ ನ್ಯೂಜಿಲೆಂಡ್ ನಲ್ಲಿ 19ರ ಕೆಳ ಹರೆಯದ ವಿಶ್ವ ಕಪ್ ನಲ್ಲಿ ಆಡಿದ್ದೆ. ನಮ್ಮ ವಿರುದ್ಧ ಅಪ್ರತಿಮ ಪ್ರದರ್ಶನ ನೀಡಿದ್ದರು. ಅವರು ದಕ್ಷಿಣ ಆಫ್ರಿಕಾದ ಕ್ರಿಕೆಟ್  ರಂಗದ ಒಬ್ಬ ಮಹಾನ್ ಆಟಗಾರ'' ಎಂದು ಅವರನ್ನು ವರ್ಣಿಸಿದ್ದಾರೆ.

ಖ್ಯಾತ ಕ್ರಿಕೆಟ್ ವಿಶ್ಲೇಷಕ ಹರ್ಷ ಭೋಗ್ಲೆ ತಮ್ಮ ಟ್ವೀಟ್ ನಲ್ಲಿ ``ದೈತ್ಯ ಹಾಶ್ ನಿವೃತ್ತರಾಗಿದ್ದಾರೆ. ಕ್ರಿಕೆಟ್ ಗೆ ಘನತೆ ತಂದವರು. ನಾವು ನೋಡಿದ ಅತ್ಯುತ್ತಮ ಕ್ರಿಕೆಟಿಗರಲ್ಲೊಬ್ಬರು. ಇಡೀ ಜಗತ್ತು ನಿಮ್ಮ ಬಗ್ಗೆ ಒಳ್ಳೆಯ ಮಾತುಗಳನ್ನಾಡುತ್ತಿದೆ, ಚಾಂಪಿಯನ್,'' ಎಂದು ಬರೆದಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತನ್ನ ಟ್ವೀಟ್‍ನಲ್ಲಿ, “ಮೊದಲು ಸ್ಟೇನ್ ಅವರ ನಿವೃತ್ತಿಯ ನೋವು, ನಂತರ ಬಾಝ್ ಅವರ ಕಿವಿಕ್ ಹಾರ್ಟ್ ಬ್ರೇಕ್, ಈಗ ಅಮ್ಲಾ ನೀಡಿದ ಕಹಿ ಸುದ್ದಿ, ಈ ಆಗಸ್ಟ್ ತಿಂಗಳು ಕ್ರಿಕೆಟ್ ತನ್ನ ಆಗಸ್ಟ್ (ಉತ್ತಮ) ಕಂಪೆನಿ ಕಳೆದುಕೊಂಡಿದೆ,'' ಎಂದು ಬರೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News