ಮೆಕಲಮ್ ಕೆಕೆಆರ್‌ನ ಸಹಾಯಕ ಕೋಚ್

Update: 2019-08-09 18:21 GMT

ಹೊಸದಿಲ್ಲಿ, ಆ.9: ನ್ಯೂಝಿಲ್ಯಾಂಡ್ ತಂಡದ ಮಾಜಿ ನಾಯಕ ಬ್ರೆಂಡನ್ ಮೆಕಲಮ್ ಐಪಿಎಲ್‌ನ ಕೋಲ್ಕತಾ ನೈಟ್ ರೈಡರ್ಸ್‌ ತಂಡಕ್ಕೆ ಮತ್ತೆ ವಾಪಸಾಗಿದ್ದಾರೆ. ಆದರೆ ಈ ಬಾರಿ ಅವರು ಸಹಾಯಕ ಕೋಚ್ ಆಗಿ ತಂಡಕ್ಕೆ ನೆರವಾಗಲಿದ್ದಾರೆ. ಕೆಕೆಆರ್‌ನ ಸಹಾಯಕ ಕೋಚ್ ಆಗಿ ಮೆಕಲಮ್ ಈಗಾಗಲೇ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ವರದಿ ತಿಳಿಸಿದೆ.

ಮೆಕಲಮ್ ಇತ್ತೀಚೆಗೆ ಎಲ್ಲ ಮಾದರಿಯ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರು.ಅವರು ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಟ್ರಿನ್‌ಬಾಗೊ ನೈಟ್ ರೈಡರ್ಸ್‌ ತಂಡದ ಮುಖ್ಯ ಕೋಚ್ ಆಗಿ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

ಮೆಕಲಮ್ 2016ರಲ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರು. ಆದರೆ ಜಾಗತಿಕ ವಿವಿಧ ಟ್ವೆಂಟಿ-20 ಲೀಗ್ ತಂಡಗಳಲ್ಲಿ ಆಡುವುದನ್ನು ಮುಂದುವರಿಸಿದ್ದರು.

 101 ಟೆಸ್ಟ್ ಪಂದ್ಯಗಳನ್ನು ಆಡಿರುವ ಮೆಕಲಮ್ 6,453 ರನ್ ದಾಖಲಿಸಿದ್ದರು. 302 ರನ್ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ. 260 ಏಕದಿನ ಪಂದ್ಯಗಳಲ್ಲಿ 6,083 ರನ್ ಜಮೆ ಮಾಡಿದ್ದಾರೆ. ಮೆಕಲಮ್ 5 ಆವೃತ್ತಿಗಳಲ್ಲಿ ಕೆಕೆಆರ್ ತಂಡದಲ್ಲಿದ್ದರು. 2009ರಲ್ಲಿ ತಂಡವನ್ನು ನಾಯಕರಾಗಿ ಮುನ್ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News