ಪ್ರೊ ಕಬಡ್ಡಿ ಲೀಗ್: ಬಂಗಾಳ ವಾರಿಯರ್ಸ್‌ಗೆ ರೋಚಕ ಜಯ

Update: 2019-08-09 18:25 GMT

ಪಾಟ್ನಾ, ಆ.9: ಬಂಗಾಳ ವಾರಿಯರ್ಸ್ ತಂಡ ಯು ಮುಂಬಾ ತಂಡದ ವಿರುದ್ಧ ಶುಕ್ರವಾರ ನಡೆದ ಏಳನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನ 32ನೇ ಪಂದ್ಯದಲ್ಲಿ 32-30 ಅಂಕಗಳ ಅಂತರದಿಂದ ರೋಚಕ ಜಯ ದಾಖಲಿಸಿದೆ.

ಇಲ್ಲಿನ ಪಾಟಲೀಪುತ್ರ ಒಳಾಂಗಣ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ವಾರಿಯರ್ಸ್ ಪರ ಪ್ರಪಂಜನ್ 6 ಅಂಕ ಗಳಿಸಿದರೆ, ಮಣಿಂದರ್ ಸಿಂಗ್ ಹಾಗೂ ಬಲ್‌ದೇವ್ ಸಿಂಗ್ ತಲಾ 5 ಅಂಕ ಗಳಿಸಿ ತಂಡದ ಗೆಲುವಿಗೆ ನೆರವಾದರು.

ಮುಂಬಾ ಪರ ಅರ್ಜುನ್ ದೇಶ್‌ವಾಲ್ 10 ಅಂಕ ಗಳಿಸಿ ಗಮನಾರ್ಹ ಪ್ರದರ್ಶನ ನೀಡಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಸುರಿಂದರ್ ಸಿಂಗ್ 4 ಅಂಕ ಗಳಿಸಿದರು.

ತಾನಾಡಿದ 5ನೇ ಪಂದ್ಯದಲ್ಲಿ 3ನೇ ಗೆಲುವು ದಾಖಲಿಸಿದ ವಾರಿಯರ್ಸ್ ಒಟ್ಟು 17 ಅಂಕ ಗಳಿಸಿ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ಮುಂಬಾ ತಾನಾಡಿದ 7ನೇ ಪಂದ್ಯದಲ್ಲಿ 4ನೇ ಸೋಲು ಕಂಡಿದೆ. ಒಟ್ಟು 18 ಅಂಕ ಗಳಿಸಿ ಅಂಕಪಟ್ಟಿಯಲ್ಲಿ 4ನೇ ಸ್ಥಾನ ಕಾಯ್ದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News