ಮಿಯಾಂದಾದ್ ದಾಖಲೆ ಮುರಿದ ಕೊಹ್ಲಿ

Update: 2019-08-11 14:46 GMT

ಪೋರ್ಟ್ ಆಫ್ ಸ್ಪೇನ್, ಆ.11: ಭಾರತದ ನಾಯಕ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಗರಿಷ್ಠ ರನ್ ಕಲೆ ಹಾಕಿದ ಸಾಧನೆ ಮಾಡಿದರು. ಈ ಮೂಲಕ 26 ವರ್ಷಗಳ ಹಿಂದೆ ಪಾಕಿಸ್ತಾನದ ಮಾಜಿ ಬ್ಯಾಟ್ಸ್‌ಮನ್ ಜಾವೇದ್ ಮಿಯಾಂದಾದ್ ನಿರ್ಮಿಸಿದ್ದ ದಾಖಲೆಯೊಂದನ್ನು ಮುರಿದರು.

ರವಿವಾರ ಇಲ್ಲಿ ನಡೆದ ವೆಸ್ಟ್‌ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಕೊಹ್ಲಿ 19 ರನ್ ತಲುಪಿದ ತಕ್ಷಣ ಹೊಸ ಮೈಲುಗಲ್ಲು ತಲುಪಿದರು.

ಮಿಯಾಂದಾದ್ ವಿಂಡೀಸ್ ವಿರುದ್ಧ 64 ಇನಿಂಗ್ಸ್‌ಗಳಲ್ಲಿ 1,930 ರನ್ ಗಳಿಸಿದ್ದರು. ಇದು ವಿಂಡೀಸ್ ವಿರುದ್ಧ ಬ್ಯಾಟ್ಸ್ ಮನ್‌ವೊಬ್ಬ ಗಳಿಸಿದ್ದ ಗರಿಷ್ಠ ರನ್ ಆಗಿತ್ತು. ಕೊಹ್ಲಿ ಕೇವಲ 34 ಇನಿಂಗ್ಸ್‌ಗಳಲ್ಲಿ ಮಿಯಾಂದಾದ್ ದಾಖಲೆಯನ್ನು ಮುರಿದು ಮುನ್ನುಗ್ಗಿದರು.

ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ಕೇವಲ 13 ಓವರ್‌ಗೆ ಸೀಮಿತಗೊಂಡ ಕಾರಣ ಕೊಹ್ಲಿಗೆ ಬ್ಯಾಟಿಂಗ್ ಮಾಡಲು ಸಾಧ್ಯವಾಗಿರಲಿಲ್ಲ.

ವೆಸ್ಟ್‌ಇಂಡೀಸ್ ವಿರುದ್ಧ ಗರಿಷ್ಠ ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳು

        1,931* ವಿರಾಟ್ ಕೊಹ್ಲಿ

        1,930  ಜಾವೇದ್ ಮಿಯಾಂದಾದ್

        1,708  ಮಾರ್ಕ್ ವಾ

         1,666  ಜಾಕ್ ಕಾಲಿಸ್

         1,624  ರಮೀಝ್ ರಾಜಾ

         1,573  ಸಚಿನ್ ತೆಂಡುಲ್ಕರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News