ಏಕದಿನ ಕ್ರಿಕೆಟ್‌ನಲ್ಲಿ ಭಾರತದ 2ನೇ ಗರಿಷ್ಠ ರನ್ ಸರದಾರನಾದ ವಿರಾಟ್ ಕೊಹ್ಲಿ

Update: 2019-08-11 17:31 GMT

ಪೋರ್ಟ್ ಆಫ್ ಸ್ಪೇನ್, ಆ.11: ಬ್ಯಾಟಿಂಗ್ ಮಾಂತ್ರಿಕ ವಿರಾಟ್ ಕೊಹ್ಲಿ ಏಕದಿನ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಪರ ಗರಿಷ್ಠ ರನ್ ಗಳಿಸಿದ ಎರಡನೇ ಬ್ಯಾಟ್ಸ್‌ಮನ್ ಎಂಬ ಹಿರಿಮೆಗೆ ಪಾತ್ರರಾದರು. ಈ ಸಾಧನೆಯ ಹಾದಿಯಲ್ಲಿ ಮಾಜಿ ನಾಯಕ ಸೌರವ್ ಗಂಗುಲಿಯ ದಾಖಲೆಯನ್ನು ಹಿಂದಿಕ್ಕಿದರು.

ರವಿವಾರ ವಿಂಡೀಸ್ ವಿರುದ್ಧ 2ನೇ ಏಕದಿನ ಪಂದ್ಯದ ವೇಳೆ ಕೊಹ್ಲಿ ಈ ಸಾಧನೆ ಮಾಡಿದರು. 30ರ ಹರೆಯದ ಕೊಹ್ಲಿ 50 ಓವರ್ ಮಾದರಿ ಕ್ರಿಕೆಟ್‌ನಲ್ಲಿ ಲೆಜೆಂಡರಿ ಸಚಿನ್ ತೆಂಡುಲ್ಕರ್(18,426)ಬಳಿಕ ಗರಿಷ್ಠ ರನ್ ಗಳಿಸಿರುವ ಭಾರತದ ಎರಡನೇ ದಾಂಡಿಗನೆಂಬ ಕೀರ್ತಿಗೆ ಭಾಜನರಾದರು. ಕೊಹ್ಲಿ ತನ್ನ 238ನೇ ಪಂದ್ಯದಲ್ಲಿ ಗಂಗುಲಿಯ ಸಾಧನೆಯನ್ನು ಹಿಂದಿಕ್ಕಿದರು. ಗಂಗುಲಿ 311 ಏಕದಿನ ಪಂದ್ಯಗಳಲ್ಲಿ 11,363 ರನ್ ಗಳಿಸಿದ್ದರು.

ಪಂದ್ಯದ 32ನೇ ಓವರ್‌ನಲ್ಲಿ ಜೇಸನ್ ಹೋಲ್ಡರ್ ಎಸೆತವನ್ನು ಬೌಂಡರಿ ಗೆರೆ ದಾಟಿಸಿದ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಒಟ್ಟು 11,364 ರನ್ ಗಳಿಸಿದರು.

ಕೊಹ್ಲಿ 112 ಎಸೆತಗಳಲ್ಲಿ 42ನೇ ಶತಕ ಪೂರೈಸಿದರು.42ನೇ ಓವರ್‌ನಲ್ಲಿ ಬ್ರಾತ್‌ವೇಟ್‌ಗೆ ವಿಕೆಟ್ ಒಪ್ಪಿಸಿದರು. ಔಟಾಗುವ ಮೊದಲು 120 ರನ್(125 ಎಸೆತ, 14 ಬೌಂಡರಿ, 1 ಸಿಕ್ಸರ್) ಗಳಿಸಿದರು.

ಏಕದಿನ ಕ್ರಿಕೆಟ್:ಭಾರತದ ಅಗ್ರ -ಐವರು ರನ್ ಸ್ಕೋರರ್‌ಗಳು

ಸಚಿನ್ ತೆಂಡುಲ್ಕರ್-18,426 ರನ್

ವಿರಾಟ್ ಕೊಹ್ಲಿ-11,364*

ಸೌರವ್ ಗಂಗುಲಿ-11,363 ರನ್

ರಾಹುಲ್ ದ್ರಾವಿಡ್ 10,889 ರನ್

ಎಂಎಸ್ ಧೋನಿ-10,773 ರನ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News