ಮರುಪರಿಶೀಲನೆ ಆಗಲಿದೆ ವಿಶ್ವಕಪ್ ಫೈನಲ್ ನ ಓವರ್ ತ್ರೋ ತೀರ್ಪು

Update: 2019-08-14 12:07 GMT

ಹೊಸದಿಲ್ಲಿ, ಆ.13: ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸೂಪರ್ ಓವರ್ ಗೆ ಹೋಗಿ ಕೊನೆಗೆ ಇಂಗ್ಲೆಂಡ್ ಗೆ ಟ್ರೋಫಿ ಸಿಗಲು ಕಾರಣವಾದ ಕೊನೆಯ ಓವರ್ ನ ಓವರ್ ತ್ರೋ ಪ್ರಕರಣವನ್ನು ಮತ್ತೆ ಪರಿಶೀಲನೆ ಮಾಡಲಾಗುವುದು ಎಂದು ಕ್ರಿಕೆಟ್ ನಿಯಮಗಳನ್ನು ರೂಪಿಸುವ ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಕ್ಲಬ್  (ಎಂಸಿಸಿ ) ಸೋಮವಾರ  ಹೇಳಿದೆ. ಈ ಪ್ರಕ್ರಿಯೆ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿದೆ. 

ಕಳೆದ ವಿಶ್ವಕಪ್ ಫೈನಲ್ ನಲ್ಲಿ ಓವರ್ ತ್ರೋ ಪ್ರಕರಣದ ತೀರ್ಪು ಕೊನೆಗೆ ನ್ಯೂಝಿಲ್ಯಾಂಡ್ ಕಪ್ ಕಳೆದುಕೊಳ್ಳಲು ಕಾರಣವಾದ ಮೇಲೆ ಕ್ರಿಕೆಟ್ ಪ್ರೇಮಿಗಳಿಂದ  ಭಾರೀ ಖಂಡನೆ ವ್ಯಕ್ತವಾಗಿತ್ತು. ಆ ಹಿನ್ನೆಲೆಯಲ್ಲಿ ಶೇನ್ ವಾರ್ನ್, ಕುಮಾರ ಸಂಗಕ್ಕರ ಮತ್ತಿತರರು ಇರುವ ವರ್ಲ್ಡ್ ಕ್ರಿಕೆಟ್ ಕಮಿಟಿ ( ಡಬ್ಲ್ಯೂ ಸಿಸಿ ) ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಪಂದ್ಯದಲ್ಲಿ ತೀರ್ಪುಗಾರರರಾಗಿ ಓವರ್ ತ್ರೋ ಬಗ್ಗೆ ತೀರ್ಪು ನೀಡಿದ್ದ ಕುಮಾರ್ ಧರ್ಮಸೇನ ಕೂಡ ಬಳಿಕ ಆ ತೀರ್ಪಿನಲ್ಲಿ ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದರು.

ಕೊನೆಯ ಓವರ್ ನ ಒಂದು ಎಸೆತದಲ್ಲಿ ಮಾರ್ಟಿನ್ ಗಪ್ಟಿಲ್ ಎಸೆದ ತ್ರೋ ಇಂಗ್ಲೆಂಡ್ ನ ಬೆನ್ ಸ್ಟೋಕ್ಸ್ ಬ್ಯಾಟಿಗೆ ತಾಗಿ ಬೌಂಡರಿ ಗೆರೆ ದಾಟಿ ಇಂಗ್ಲೆಂಡ್ ಗೆ ಹೆಚ್ಚುವರಿ ನಾಲ್ಕು ರನ್ ನೀಡಲಾಗಿತ್ತು. ಹಾಗಾಗಿ ಪಂದ್ಯ ಟೈ ಆಗಿ ಸೂಪರ್ ಓವರ್ ಗೆ ಹೋಯಿತು. ಅಲ್ಲೂ ಟೈ ಆದ ಮೇಲೆ ಹೆಚ್ಚು ಬೌಂಡರಿ ಬಾರಿಸಿದ ಆಧಾರದಲ್ಲಿ ಇಂಗ್ಲೆಂಡ್  ವಿಶ್ವಕಪ್ ಚಾಂಪಿಯನ್ ಎಂದು ಘೋಷಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News