ವಿಶ್ವ ಕುಸ್ತಿ ಚಾಂಪಿಯನ್‌ಶಿಪ್ ಟ್ರಯಲ್ಸ್‌ನಿಂದ ಹಿಂದೆ ಸರಿದ ಪರ್ವೀನ್ ರಾಣಾ

Update: 2019-08-13 18:03 GMT

ಹೊಸದಿಲ್ಲಿ, ಆ.13: ಕಝಕ್‌ಸ್ತಾನದಲ್ಲಿ ಸೆ.14ರಿಂದ 22ರ ತನಕ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ಗೆ ಡಬಲ್ ಒಲಿಂಪಿಯನ್ ಸುಶೀಲ್ ಕುಮಾರ್ ಹಾದಿ ಸುಗಮವಾಗಿದೆ.74ಕೆಜಿ ತೂಕ ವಿಭಾಗದಲ್ಲಿ ಅವರ ಪ್ರಮುಖ ಎದುರಾಳಿ ಪರ್ವೀನ್ ರಾಣಾ ಭುಜನೋವಿನಿಂದಾಗಿ ವಿಶ್ವ ಚಾಂಪಿಯನ್‌ಶಿಪ್‌ನ ಟ್ರಯಲ್ಸ್‌ನಿಂದ ಹೊರಗುಳಿದಿದ್ದಾರೆ.

‘‘ನನಗಾಗಿರುವ ಗಾಯ ನಿಜಕ್ಕೂ ಗಂಭೀರವಾಗಿದೆ. ನನ್ನ ಎಡ ಭುಜದ ಮಾಂಸಖಂಡ ಬಿರುಕುಬಿಟ್ಟಿದೆ. ಕನಿಷ್ಠ ಆರು ವಾರಗಳ ಕಾಲ ಕುಸ್ತಿ ಮ್ಯಾಟ್‌ನಿಂದ ದೂರ ಉಳಿಯುವಂತೆ ವೈದ್ಯರು ಸಲಹೆ ನೀಡಿದ್ದಾರೆ’’ ಎಂದು ರಾಣಾ ಹೇಳಿದ್ದಾರೆ.

‘‘ಸೀನಿಯರ್ ನ್ಯಾಶನಲ್ಸ್ ಟೂರ್ನಿಯ ವೇಳೆ ಸ್ಪರ್ಧೆಗೆ ವಾಪಸಾಗುವ ಗುರಿ ಇಟ್ಟುಕೊಂಡಿರುವೆ. ಮುಂದಿನ ವರ್ಷದ ಜನವರಿಯಲ್ಲಿ ಒಲಿಂಪಿಕ್ಸ್ ಕ್ವಾಲಿಫಿಕೇಶನ್ ಟೂರ್ನಮೆಂಟ್ ಇದೆ. ಅದಕ್ಕೂ ಮೊದಲು ಟ್ರಯಲ್ಸ್ ನಡೆಯಲಿದೆ. ಆ ಟ್ರಯಲ್ಸ್‌ನಲ್ಲಿ ಸುಶೀಲ್‌ರನ್ನು ಎದುರಿಸುವುದು ಖಚಿತ’’ ಎಂದು ರಾಣಾ ಹೇಳಿದ್ದಾರೆ.

 ಆಗಸ್ಟ್ 18ಕ್ಕಿಂತ ಮೊದಲು ಟ್ರಯಲ್ಸ್ ನಡೆಯಲಿದೆ. ವಲ್‌ರ್ ್ಡ ಚಾಂಪಿಯನ್‌ಶಿಪ್‌ಗೆ ಅಂತಿಮ ಪಟ್ಟಿ ಕಳುಹಿಸಲು ಆಗಸ್ಟ್ 18 ಅಂತಿಮ ಗಡುವು ನೀಡಲಾಗಿದೆ. ಐದು ಒಲಿಂಪಿಕ್ಸ್ ತೂಕ ವಿಭಾಗಗಳಾದ-57 ಕೆಜಿ, 65 ಕೆಜಿ, 86 ಕೆಜಿ,97 ಕೆಜಿ ಹಾಗೂ 125 ಕೆಜಿ ವಿಭಾಗಗಳಲ್ಲಿ ಜು.26ಕ್ಕೆ ಟ್ರಯಲ್ಸ್ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News