ಸ್ವೇನ್‌ನ ನೆಸ್ಟರ್‌ಗೆ 4 ತಿಂಗಳು ನಿಷೇಧ ಹೇರಿದ ಎಐಎಫ್‌ಎಫ್

Update: 2019-08-14 17:59 GMT

ಚೆನ್ನೈ, ಆ.14: ಐ-ಲೀಗ್ ಚಾಂಪಿಯನ್ಸ್ ಚೆನ್ನೈ ಸಿಟಿ ಎಫ್‌ಸಿನೊಂದಿಗಿನ ಒಪ್ಪಂದವನ್ನು ಉಲ್ಲಂಘಿಸಿರುವ ತಪ್ಪಿಗೆ ಅಖಿಲ ಭಾರತ ಫುಟ್ಬಾಲ್ ಒಕ್ಕೂಟ(ಎಐಎಫ್‌ಎಫ್)ಸ್ಪೇನ್‌ನ ಮಿಡ್‌ಫೀಲ್ಡರ್ ನೆಸ್ಟರ್ ಗೊರ್ಡಿಲ್ಲೊಗೆ ನಾಲ್ಕು ತಿಂಗಳ ನಿಷೇಧ ವಿಧಿಸಿದೆ.

ಕಳೆದ ಋತುವಿನಲ್ಲಿ ಚೆನ್ನೈ ಸಿಟಿ ಎಫ್‌ಸಿ ಪರ 8 ಗೋಲುಗಳು ಹಾಗೂ 12 ಅಸಿಸ್ಟ್‌ನ ಮೂಲಕ ಐ-ಲೀಗ್ ಚಾಂಪಿಯನ್ಸ್ ಪ್ರಶಸ್ತಿ ಜಯಿಸಲು ಪ್ರಮುಖ ಪಾತ್ರವಹಿಸಿದ್ದ 29ರ ಹರೆಯದ ನೆಸ್ಟರ್ ಚೆನ್ನೈ ಎಫ್‌ಸಿಗೆ ಮಾಹಿತಿ ನೀಡದೆ ಐಎಸ್‌ಎಲ್ ಕ್ಲಬ್ ಎಫ್‌ಸಿ ಪುಣೆ ಸಿಟಿಯೊಂದಿಗೆ ಮೇನಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದರು. ನೆಸ್ಟರ್ ಅವರ ಚೆನ್ನೈ ಸಿಟಿಯೊಂದಿಗೆ ಮಾಡಿಕೊಂಡಿದ್ದ ಒಪ್ಪಂದ 2020ರ ಮೇ 31ರ ತನಕವಿದೆ. ಕೊಯಮತ್ತೂರ್ ಮೂಲದ ಕ್ಲಬ್ ಈ ವಿಚಾರವನ್ನು ಎಐಎಫ್‌ಎಫ್ ಗಮನಕ್ಕೆ ತರಲು ನಿರ್ಧರಿಸಿದ್ದು ನಾಲ್ಕು ತಿಂಗಳ ನಿಷೇಧದ ಅವಧಿ ಮುಗಿಯುವ ತನಕ ನೆಸ್ಟರ್ ಯಾವುದೇ ಕ್ಲಬ್‌ಪರ ಆಡುವಂತಿಲ್ಲ. ಅವರ ಸೇವೆ ನಮಗೆ ಬೇಕಿಲ್ಲ ಎಂದು ಚೆನ್ನೈ ಸಿಟಿ ಎಫ್‌ಸಿ ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News