ಭಾರತ ವಿರುದ್ಧ ಟ್ವೆಂಟಿ-20 ಸರಣಿಗೆ ತನ್ನನ್ನು ಕಡೆಗಣಿಸಿದ್ದಕ್ಕೆ ಸ್ಟೇಯ್ನ್ ಆಕ್ರೋಶ

Update: 2019-08-14 18:06 GMT

ಜೋಹಾನ್ಸ್‌ಬರ್ಗ್, ಆ.14: ಭಾರತ ವಿರುದ್ಧ ಮುಂದಿನ ತಿಂಗಳು ನಡೆಯಲಿರುವ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಗೆ ತನ್ನನ್ನು ಕಡೆಗಣಿಸಿರುವ ಕ್ರಿಕೆಟ್ ದಕ್ಷಿಣ ಆಫ್ರಿಕ(ಸಿಎಸ್‌ಎ)ವಿರುದ್ಧ ದಕ್ಷಿಣ ಆಫ್ರಿಕದ ವೇಗದ ಬೌಲರ್ ಡೇಲ್ ಸ್ಟೇಯ್ನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಆಫ್ರಿಕ ಆಯ್ಕೆಗಾರರು ಟ್ವೆಂಟಿ-20 ಸರಣಿಗೆ ಮೂವರು ಹೊಸ ಆಟಗಾರರಾದ ಟೆಂಬಾ ಬವುಮಾ, ಜೊರ್ನ್ ಫೂಟ್ಯುನ್ ಹಾಗೂ ಅನ್ರಿಚ್ ನೊರ್ಟ್ಜೆಗೆ ಅವಕಾಶ ನೀಡಿತ್ತು. ಡೇಲ್ ಸ್ಟೇಯ್ನೆ ಹೆಸರು ತಂಡದಲ್ಲಿ ಮಾಯವಾಗಿತ್ತು.

ತಂಡದಲ್ಲಿ ತನಗೆ ಸ್ಥಾನ ನೀಡದ್ದನ್ನು ಟ್ವಿಟರ್‌ನಲ್ಲಿ ಪ್ರಶ್ನಿಸಿರುವ ಸ್ಟೇಯ್ನಿ, ತಾನು ಸ್ವತಃ ಆಯ್ಕೆಗೆ ಲಭ್ಯವಿದ್ದೆ. ಆದರೆ ಆಯ್ಕೆಗಾರರು ನನ್ನ ಸಂಖ್ಯೆಯನ್ನು ಮಿಸ್ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಸ್ಟೇಯ್ನ ಕಳೆದ ವಾರ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರು. ಆದರೆ, ಸೀಮಿತ ಓವರ್ ಕ್ರಿಕೆಟ್‌ನಲ್ಲಿ ತಾನು ಲಭ್ಯವಿರುವುದಾಗಿ ಹೇಳಿದ್ದರು.

ಒಟ್ಟು 201 ಟ್ವೆಂಟಿ-20 ಪಂದ್ಯಗಳನ್ನು ಆಡಿರುವ ಸ್ಟೇಯ್ನೆ 231 ವಿಕೆಟ್‌ಗಳನ್ನು ಉರುಳಿಸಿದ್ದಾರೆ. 9 ರನ್‌ಗೆ 4 ವಿಕೆಟ್ ಅವರ ಶ್ರೇಷ್ಠ ಬೌಲಿಂಗ್ ಪ್ರದರ್ಶನವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News