ಪ್ರೊ ಕಬಡ್ಡಿ ಲೀಗ್: ಯೋಧಾ ವಿರುದ್ಧ ಸ್ಟೀಲರ್ಸ್ಗೆ ಜಯ
Update: 2019-08-14 23:38 IST
ಅಹ್ಮದಾಬಾದ್, ಆ.14: ಪ್ರೊ ಕಬಡ್ಡಿ ಲೀಗ್‌ನಲ್ಲಿ ಬುಧವಾರ ನಡೆದ 41ನೇ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್ ತಂಡ ಯುಪಿ ಯೋಧಾ ತಂಡವನ್ನು 36-33 ಅಂಕಗಳ ಅಂತರದಿಂದ ಮಣಿಸಿದೆ.
ಸ್ಟೀಲರ್ಸ್ ಪರ ವಿಕಾಸ್ ಖಂಡೋಲ 12 ಅಂಕ ಗಳಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಸುನೀಲ್ ಆರು ಅಂಕ ಗಳಿಸಿದರು.
ಯುಪಿ ಪರವಾಗಿ ಶಿಖರ್ ಜಾಧವ್ 9 ಹಾಗೂ ಮನು ಗೋಯತ್ 5 ಅಂಕ ಗಳಿಸಿದರು.
ಲೀಗ್‌ನಲ್ಲಿ ತಾನಾಡಿದ 7ನೇ ಪಂದ್ಯದಲ್ಲಿ 4ನೇ ಜಯ ದಾಖಲಿಸಿರುವ ಹರ್ಯಾಣ ಸ್ಟೀಲರ್ಸ್ ಒಟ್ಟು 21 ಅಂಕ ಗಳಿಸಿ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.
ಲೀಗ್‌ನಲ್ಲಿ ಆಡಿರುವ 8ನೇ ಪಂದ್ಯದಲ್ಲಿ 4ನೇ ಸೋಲು ಕಂಡಿರುವ ಯುಪಿ ಒಟ್ಟು 17 ಅಂಕ ಗಳಿಸಿ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.