ಏಶ್ಯನ್ ಅಥ್ಲೀಟ್ ಆಯೋಗದ ಸದಸ್ಯರಾಗಿ ಪಿ.ಟಿ. ಉಷಾ ನೇಮಕ

Update: 2019-08-14 18:09 GMT

ಕೊಚ್ಚಿ, ಆ.14: ಏಶ್ಯನ್ ಅಥ್ಲೆಟಿಕ್ಸ್ ಅಸೋಸಿಯೇಶನ್‌ನ ಅಥ್ಲೀಟ್ ಆಯೋಗದ (ಎಎಎ) ಸದಸ್ಯರಾಗಿ ಪಿ.ಟಿ.ಉಷಾ ನೇಮಕಗೊಂಡಿದ್ದಾರೆ.

 ಕಝಕಿಸ್ತಾನದ ಮಾಜಿ ಒಲಿಂಪಿಕ್ಸ್ ಚಾಂಪಿಯನ್ ಟ್ರಿಪಲ್ ಜಂಪರ್ ರಿಪಕೋವಾ, ಚೀನಾದ ವಂಗ್ ಯು, ಮಲೇಷ್ಯಾದ ಲೀ ಹುಪ್ ವೇಯ್ ಮತ್ತು ಸೌದಿ ಅರೇಬಿಯಾದ ಸಾದ್ ಶಹದಾದ್ ಅಥ್ಲೀಟ್ ಆಯೋಗದಲ್ಲಿರುವ ಸದಸ್ಯರು.

ಪಿ.ಟಿ.ಉಷಾರಿಗೆ ಅಥ್ಲೀಟ್ ಆಯೋಗವು ನೇಮಕಾತಿ ಆದೇಶವನ್ನು ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾದ (ಎಎಫ್‌ಐ) ಮೂಲಕ ಕಳುಹಿಸಿಕೊಟ್ಟಿದೆ.

ಪಿ.ಟಿ.ಉಷಾ ಅಥ್ಲೀಟ್ ಆಯೋಗದ ಸದಸ್ಯರಾಗಿ ಎರಡನೇ ಬಾರಿ ನೇಮಕಗೊಂಡಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಅಥ್ಲೀಟ್ ಆಯೋಗ ರಚನೆಗೊಂಡಾಗ ಉಷಾ ಅದರ ಸದಸ್ಯರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News