ನಮ್ಮ ದೇಶದಲ್ಲಿ ಉತ್ತಮ ಪ್ರದರ್ಶನಕ್ಕೆ ಬೆಲೆ ಇಲ್ಲ

Update: 2019-08-17 18:15 GMT

  ಹೊಸದಿಲ್ಲಿ, ಆ.17: ಈ ವರ್ಷದ ಅರ್ಜುನ ಪ್ರಶಸ್ತಿ ಕೈತಪ್ಪಿರುವುದು ಖಾತ್ರಿಯಾಗುತ್ತಿದ್ದಂತೆಯೇ ಪ್ರತಿಕ್ರಿಯೆ ನೀಡಿರುವ ಬ್ಯಾಡ್ಮಿಂಟನ್ ಆಟಗಾರ ಪ್ರಣಯ್ 12 ಸದಸ್ಯರನ್ನು ಒಳಗೊಂಡ ಆಯ್ಕೆ ಸಮಿತಿಯ ಮೇಲೆ ಹರಿಹಾಯ್ದಿದ್ದಾರೆ.

‘‘ನಮ್ಮ ದೇಶದಲ್ಲಿ ಆಟಗಾರನ ಪ್ರದರ್ಶನವನ್ನು ಕನಿಷ್ಠವಾಗಿ ಪರಿಗಣಿಸುತ್ತಾರೆ. ಆಟಗಾರ ತನ್ನ ಹೆಸರನ್ನು ನಾಮನಿರ್ದೇಶನ ಪಟ್ಟಿಯಲ್ಲಿರಲು ಬಯಸಬೇಕಾದರೆ ಆತನಿಗೆ ಪ್ರಭಾವಿ ವ್ಯಕ್ತಿಗಳ ಬೆಂಬಲ ಇರಬೇಕಾಗುತ್ತದೆ’’ ಎಂದು ಟ್ವೀಟ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

  ‘‘ಒಂದು ವೇಳೆ ನೀವು ಪ್ರಶಸ್ತಿ ಪಟ್ಟಿಯಲ್ಲಿ ನಿಮ್ಮ ಹೆಸರು ಇರಬೇಕೆಂದು ಬಯಸಿದರೆ, ನಿಮ್ಮ ಹೆಸರನ್ನು ಪಟ್ಟಿಯಲ್ಲಿ ಇರುವಂತೆ ನೋಡಿಕೊಳ್ಳುವ ವ್ಯಕ್ತಿ ನಿಮ್ಮ ಬಳಿ ಇದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ನಮ್ಮ ದೇಶದಲ್ಲಿ ಕಾರ್ಯಕ್ಷಮತೆಯನ್ನು ಕನಿಷ್ಠವಾಗಿ ಪರಿಗಣಿಸಲಾಗುತ್ತದೆ. ಇದು ನಮ್ಮ ದೇಶದ ಬೇಸರದ ವಿಚಾರ. ಆದರೆ,ಇದಕ್ಕೆ ನಮ್ಮಿಂದ ಏನೂ ಮಾಡಲು ಸಾಧ್ಯವಿಲ್ಲ. ನಮಗೆ ಸಾಧ್ಯವಾದಷ್ಟು ದಿನ ಆಡಬೇಕಾಗಿದೆ’’ ಎಂದು ಪ್ರಣಯ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News