ಮಕ್ಕಳೊಂದಿಗೆ ಕ್ರಿಕೆಟ್ ಆಡಿದ ಧೋನಿ

Update: 2019-08-17 18:22 GMT

ಲೇಹ್, ಆ.17: ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಲೆಫ್ಟಿನೆಂಟ್ ಕರ್ನಲ್ ಮಹೇಂದ್ರ ಸಿಂಗ್ ಧೋನಿ ಅವರು ಜಮ್ಮು ಮತ್ತು ಕಾಶ್ಮೀರದ ಪ್ರಾದೇಶಿಕ ಸೇನೆಯಲ್ಲಿ ಎರಡು ವಾರಗಳನ್ನು ಕಳೆದಿದ್ದಾರೆ.

ಧೋನಿ ಮಕ್ಕಳೊಂದಿಗೆ ಕ್ರಿಕೆಟ್ ಆಡುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಧೋನಿ ಲಡಾಖ್‌ನಲ್ಲಿ ಕ್ರಿಕೆಟ್ ಅಕಾಡಮಿ ಆರಂಭಿಸುವ ಭರವಸೆ ನೀಡಿದ್ದಾರೆ.

38ರ ಹರೆಯದ ಧೋನಿ ಕ್ರಿಕೆಟ್‌ನಿಂದ ಎರಡು ತಿಂಗಳುಗಳ ಕಾಲ ದೂರ ಉಳಿದಿದ್ದಾರೆ. ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಭಾರತ ಸೋಲು ಅನುಭವಿಸಿದ ಬಳಿಕ ಧೋನಿ ಕ್ರಿಕೆಟ್‌ನಿಂದ ಎರಡು ತಿಂಗಳುಗಳ ಬಿಡುವು ಮಾಡಿಕೊಂಡು ಆರ್ಮಿ ಜೊತೆ ತೆರಳಿದ್ದಾರೆ.

ಪ್ರಾದೇಶಿಕ ಸೇನೆ 106 ಟಿಎ ಬೆಟಾಲಿಯನ್(ಪ್ಯಾರಾ)ನಲ್ಲಿ ಕಳೆದ ಎರಡು ವಾರಗಳಿಂದ ಧೋನಿ ತರಬೇತಿ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News